ADVERTISEMENT

ಮುಂದಿನ ಹಂತಕ್ಕೆ ‘ಪರದಂಡ’, ‘ಬೊವ್ವೇರಿಯಂಡ’

ಕೊಡವ ಕುಟುಂಬಗಳ ಕುಲ್ಲೇಟಿರ ಕಪ್ ಹಾಕಿ

​ಪ್ರಜಾವಾಣಿ ವಾರ್ತೆ
Published 16 ಮೇ 2018, 12:52 IST
Last Updated 16 ಮೇ 2018, 12:52 IST
ನಾಪೋಕ್ಲುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಕುಲ್ಲೇಟಿರ ಕಪ್ ಹಾಕಿ ಟೂರ್ನಿಯಲ್ಲಿ ಅಂಜಪರವಂಡ ಮತ್ತು ಚೆಕ್ಕೇರ ತಂಡಗಳ ನಡುವೆ ಸೆಣೆಸಾಟ ನಡೆಯಿತು
ನಾಪೋಕ್ಲುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಕುಲ್ಲೇಟಿರ ಕಪ್ ಹಾಕಿ ಟೂರ್ನಿಯಲ್ಲಿ ಅಂಜಪರವಂಡ ಮತ್ತು ಚೆಕ್ಕೇರ ತಂಡಗಳ ನಡುವೆ ಸೆಣೆಸಾಟ ನಡೆಯಿತು   

ನಾಪೋಕ್ಲು: ಕೊಡವ ಕುಟುಂಬಗಳ ನಡುವೆ ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಲ್ಲೇಟಿರ ಹಾಕಿ ಟೂರ್ನಿಯಲ್ಲಿ ಮಂಗಳವಾರ ಪರದಂಡ, ಬೊವ್ವೇರಿಯಂಡ ಪ್ರೀ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದವು.

ಮಂಗಳವಾರ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಬಿದ್ದಾಟಂಡ ಕಪ್ ಹಾಕಿ ಟೂರ್ನಿಯ ರನ್ನರ್ಸ್ ಆಗಿ ಹೊರಹೊಮ್ಮಿದ್ದ ಪರದಂಡ ತಂಡವು ಕೊಂಗೇಟಿರ ತಂಡವನ್ನು 2-0 ಗೋಲುಗಳಿಂದ ಸೋಲಿಸಿತು. ಪರದಂಡ ತಂಡದ ಪರ ದೀರಜ್ ಮುತ್ತಣ್ಣ 1, ಕೀರ್ತನ್ 1 ಗೋಲು ಹೊಡೆದು ತಂಡದ ಗೆಲುವಿಗೆ ಕಾರಣರಾದರು. ನಂತರ ನಡೆದ ಪಂದ್ಯದಲ್ಲಿ ಬೊವ್ವೇರಿಯಂಡ ತಂಡವು ಮಾಜಿ ಚಾಂಪಿಯನ್ ನೆಲ್ಲಮಕ್ಕಡ ತಂಡವನ್ನು 3-2 ಗೋಲುಗಳಿಂದ ಮಣಿಸಿತು. ಬೊವ್ವೇರಿಯಂಡ ಪರ ಸುಜಿತ್ 2, ಸಚಿನ್ 1 ಗೋಲು ಬಾರಿಸಿದರು. ನೆಲ್ಲಮಕ್ಕಡ ಪರ ಪೂವಣ್ಣ 1, ಸುಬ್ರಮಣಿ 1, ಗೋಲು ಹೊಡೆದರು.

ಮೂರನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಅಂಜಪರುವಂಡ ತಂಡವು ಚೆಕ್ಕೇರ ತಂಡವನ್ನು 3-0 ಗೋಲುಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಅಂಜಪರುವಂಡ ಜತನ್ 3 ಗೋಲು ಹೊಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು. ಬಳಿಕ ನಡೆದ ಪಂದ್ಯದಲ್ಲಿ ಮಂಡೇಪಂಡ ತಂಡವು ಚೆಪ್ಪುಡಿರ ತಂಡವನ್ನು 3-1 ಗೋಲುಗಳಿಂದ ಸೋಲಿಸಿ ಪ್ರೀ ಕ್ವಾಟರ್ ಹಂತಕ್ಕೆ ಪ್ರವೇಶ ಪಡೆಯಿತು, ಮಂಡೇಪಂಡ ಪರ ವಚನ್ 2, ಚೇತನ್ 1, ಗೋಲು ಬಾರಿಸಿದರೆ, ಚೆಪ್ಪುಡೀರ ಪರ ಸಜನ್ 1 ಗೋಲು ಬಾರಿಸಿ ಅಂತರವನ್ನುತಗ್ಗಿಸಿಕೊಂಡರು.

ADVERTISEMENT

ಬುಧವಾರ ನಡೆಯಲಿರುವ ಪಂದ್ಯಗಳು

ಬೆಳಿಗ್ಗೆ 9.30ಕ್ಕೆ ಮುರುವಂಡ- ಪಳಂಗಂಡ
ಬೆಳಿಗ್ಗೆ 10.30ಕ್ಕೆ ಚೇಂದಿರ- ಸೊಮೆಯಂಡ
ಬೆಳಿಗ್ಗೆ 11.30ಕ್ಕೆ ಚೇಂದಂಡ ಹಾಗೂ ಮಚ್ಚಂಡ ಮತ್ತು ಮುಕ್ಕಾಟಿರ (ಬೊಂದ) ತಂಡಗಳ ನಡುವಿನ ವಿಜೇತ ತಂಡದ ನಡುವೆ. ಮಧ್ಯಾಹ್ನ 12.30ಕ್ಕೆ ಕೂತಂಡ- ಕುಲ್ಲೇಟಿರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.