ADVERTISEMENT

ಮೂರು ತಂಡ ಕ್ವಾರ್ಟರ್ ಫೈನಲ್‌ಗೆ

ಕೊಡವ ಕುಟುಂಬಗಳ ನಡುವಿನ ಹಾಕಿ ಟೂರ್ನಿ ಕುಲ್ಲೇಟಿರ ಕಪ್ ಹಾಕಿ

​ಪ್ರಜಾವಾಣಿ ವಾರ್ತೆ
Published 17 ಮೇ 2018, 10:02 IST
Last Updated 17 ಮೇ 2018, 10:02 IST
ನಾಪೋಕ್ಲುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕುಲ್ಲೇಟಿರ ಕಪ್ ಹಾಕಿ ಟೂರ್ನಿಯಲ್ಲಿ ಚೇಂದೀರ ಮತ್ತು ಸೋಮಯಂಡ ತಂಡಗಳ ನಡುವೆ ಸೆಣಸಾಟ ನಡೆಯಿತು.
ನಾಪೋಕ್ಲುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕುಲ್ಲೇಟಿರ ಕಪ್ ಹಾಕಿ ಟೂರ್ನಿಯಲ್ಲಿ ಚೇಂದೀರ ಮತ್ತು ಸೋಮಯಂಡ ತಂಡಗಳ ನಡುವೆ ಸೆಣಸಾಟ ನಡೆಯಿತು.   

ನಾಪೋಕ್ಲು: ಕೊಡವ ಕುಟುಂಬಗಳ ನಡುವೆ ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಲ್ಲೇಟಿರ ಹಾಕಿ ಟೂರ್ನಿಯಲ್ಲಿ ಬುಧವಾರ ಪಳಂಗಂಡ, ಚೇಂದಂಡ, ಸೋಮೆಯಂಡ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿದವು. ಬುಧವಾರ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಮುರುವಂಡ ತಂಡವು ಪಳಂಗಂಡ ತಂಡವನ್ನು ಎದುರಿಸಿತು.

ಪಂದ್ಯದಲ್ಲಿ ಎರಡೂ ತಂಡಗಳು 2-2 ಅಂತರದ ಸಮಬಲ ಸಾಧಿಸಿದವು. ಬಳಿಕ ಟೈಬ್ರೇಕರ್ನಲ್ಲಿ ಪಳಂಗಂಡ ತಂಡವು 3-2 ಮುನ್ನಡೆ ಸಾಧಿಸಿ ಗೆಲುವು ಸಾಧಿಸಿತು. ಮುರುವಂಡ ತಂಡದ ಪರ ಮಿಥುನ್ ಅಯ್ಯಣ್ಣ ಹಾಗೂ ಕಾರ್ಯಪ್ಪ ತಲಾ ಒಂದು ಗೋಲು ಗಳಿಸಿದರು. ಪಳಂಗಂಡ ತಂಡದ ಪರ ಮುತ್ತಣ್ಣ ಹಾಗೂ ಪ್ರಧಾನ್ ತಲಾ ಒಂದು ಗೋಲು ಗಳಿಸಿದರು.

ಟೈ ಬ್ರೇಕರ್‌ನಲ್ಲಿ ಮುರುವಂಡ ತಂಡದ ಆಟಗಾರರಾದ ಅಪ್ಪಣ್ಣ ಹಾಗೂ ಅಣ್ಣಯ್ಯ ತಲಾ ಒಂದು ಗೋಲು ದಾಖಲಿಸಿದರೆ ಪಳಂಗಂಡ ತಂಡದ ಪರ ಬೆಳ್ಯಪ್ಪ, ಕಾಳಪ್ಪ ಹಾಗೂ ಪ್ರಧಾನ್ ಒಂದೊಂದು ಗೋಲು ಹೊಡೆದು ತಂಡದ ಗೆಲುವಿಗೆ ಕಾರಣರಾದರು. ಎರಡನೇ ಪಂದ್ಯದಲ್ಲಿ ಚೇಂದಿರ ತಂಡವು ಸೋಮೆಯಂಡ ತಂಡದ ವಿರುದ್ಧ ಸೋಲನ್ನು ಅನುಭವಿಸಿತು.

ADVERTISEMENT

ಮೆಯಂಡ ತಂಡವು 1-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಸೋಮೆಯಂಡ ತಂಡದ ಪರ ಅಪ್ಪಯ್ಯ ಒಂದು ಗೋಲು ದಾಖಲಿಸಿದರು.

ಚೇಂದಂಡ ಮತ್ತು ಮುಕ್ಕಾಟಿರ(ಬೋಂದ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೇಂದಂಡ ತಂಡವು ಮುಕ್ಕಾಟಿರ ತಂಡದ ವಿರುದ್ದ 2-0 ಅಂತರದಲ್ಲಿ ಗೆಲುವು ಸಾಧಿಸಿತು. ಚೇಂದಂಡ ತಂಡದ ಸೋನು ಮತ್ತು ಮೋಕ್ಷಿತ್ ತಲಾ ಒಂದು ಗೋಲು ಹೊಡೆದು ತಂಡದ ಗೆಲುವಿಗೆ ಕಾರಣರಾದರು.

ಇದಕ್ಕೂ ಮೊದಲು ನಡೆದ ಮಚ್ಚಂಡ ಮತ್ತು ಮುಕ್ಕಾಟಿರ (ಬೋಂದ) ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ಬೋಂದ ತಂಡವು ಟೈಬ್ರೇಕರ್‌ನಲ್ಲಿ ಮಚ್ಚಂಡ ತಂಡದ ವಿರುದ್ಧ ಗೆಲುವು ಸಾಧಿಸಿತು. ಮಚ್ಚಂಡ ತಂಡದ ಪರ ಚೇತನ್, ಪ್ರಿನ್ಸ್ ಮತ್ತು ಮಂಜು ತಲಾ ಒಂದು ಗೋಲು ದಾಖಲಿಸಿದರು. ಮುಕ್ಕಾಟಿರ (ಬೋಂದ) ತಂಡದ ಪರ ಚಿಣ್ಣಪ್ಪ, ಚಿರನ್, ಮಿಥುನ್ಕುಶಾಲಪ್ಪ, ಅಯ್ಯಪ್ಪ ಹಾಗು ವಸಂತ ತಲಾ ಒಂದು ಗೊಲು ಗಳಿಸಿ 5-3 ಗೋಲುಗಳ ಮುನ್ನಡೆಯೊಂದಿಗೆ ಮುಕ್ಕಾಟಿರ(ಬೊಂದ) ತಂಡವು ಗೆಲುವು ಸಾಧಿಸಿತು.ಆದರೆ ನಂತರದ ಪಂದ್ಯದಲ್ಲಿ ಚೇಂದಂಡ ತಂಡದ ವಿರುದ್ಧ ಸೋಲನ್ನು ಅನುಭವಿಸಿತು.

ಗುರುವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯಗಳು

ಬೆಳಿಗ್ಗೆ 8.30ಕ್ಕೆ ಪರದಂಡ - ಬೊವ್ವೇರಿಯಂಡ
ಬೆಳಿಗ್ಗೆ 10 ಕ್ಕೆ ಅಂಜಪರವಂಡ - ಚೆಪ್ಪುಡಿರ
ಬೆಳಿಗ್ಗೆ 11ಕ್ಕೆ ಪಳಂಗಂಡ - ಕೂತಂಡ ಮತ್ತು ಕುಲ್ಲೇಟಿರ ತಂಡಗಳ ನಡುವಿನ ಪಂದ್ಯದಲ್ಲಿ ವಿಜೇತ ತಂಡ
ಮಧ್ಯಾಹ್ನ 12ಕ್ಕೆ ಸೋಮೆಯಂಡ - ಚೇಂದಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.