ADVERTISEMENT

ಮೆರವಣಿಗೆಗೆ ಜನಪದ ಕಲೆಗಳ ಮೆರುಗು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 8:45 IST
Last Updated 1 ಅಕ್ಟೋಬರ್ 2017, 8:45 IST

ನಾಪೋಕ್ಲು: ಮೂರ್ನಾಡಿನ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ ಏರ್ಪಡಿಸಿದ್ದ ಆಯುಧ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
ಪಾಂಡಾಣೆ ಶಾಲಾ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಅಲಂಕೃತ ವಾಹನಗಳಿಗೆ ಸಾಮೂಹಿಕ ಪೂಜೆ ಸಲ್ಲಿಸಲಾಯಿತು.

ಬಳಿಕ ಪಟ್ಟಣದ ಮುಖ್ಯ ಬೀದಿಯಲ್ಲಿ ಕೀಲು ಕುದುರೆ, ಕರಗ, ಹಾಸ್ಯ ಗೊಂಬೆ, ಯಕ್ಷಗಾನ ಬೇತಾಳ ಗೊಂಬೆ ನೃತ್ಯದೊಂದಿಗೆ ಅಲಕೃಂತ ವಾಹನಗಳ ಮೆರವಣಿಗೆ ನಡೆಯಿತು.
ಗಜಾಸುರ ವಧೆ, ಗಣಪತಿ, ಡ್ರ್ಯಾಗನ್, ಅಪಘಾತದಲ್ಲಿ ಬಲಿ, ಕಾವೇರಿ ಮಾತೆ, ದೋಣಿ ಚಿತ್ರಣವಿದ್ದ ಅಲಂಕೃತ ವಾಹನಗಳು ಸಾರ್ವಜನಿಕರ ಗಮನ ಸೆಳೆಯಿತು.

ಬಳಿಕ ಸಭಾ ಕಾರ್ಯಕ್ರಮದಲ್ಲಿ ಕಾಂತೂರು ಮೂರ್ನಾಡು ಗ್ರಾ.ಪಂ ಅಧ್ಯಕ್ಷೆ ಕಲ್ಲುಮುಟ್ಲು ಜಮುನಾ, ಚೇಂಬರ್ ಆಫ್ ಕಾರ್ಮಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಬಡುವಂಡ ಅರುಣ್ ಅಪ್ಪಚ್ಚು, ಆರ್ಎಂಸಿ ಸದಸ್ಯ ವಾಂಚೀರ ಜಯ ನಂಜಪ್ಪ, ಗ್ರಾ.ಪಂ ಸದಸ್ಯೆ ಮೀನಾಕ್ಷಿ ಕೇಶವ, ಕೊಡಗು ಜಿಲ್ಲಾ ವಾಹನ ಮಾಲಿಕರು, ಚಾಲಕರ ಸಂಘದ ಅಧ್ಯಕ್ಷ ಎಂ.ಎಂ.ಉಸ್ಮಾನ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿದರು.

ADVERTISEMENT

ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಬುಟ್ಟಂಡ ಸುನೀಲ್ ಅಧ್ಯಕ್ಷತೆ ವಹಿಸಿದ್ರು.ಜಿಲ್ಲಾ ಪಂಚಾಯಿತಿ ಸದಸ್ಯೆ ಕಲಾವತಿ ಪೂವಪ್ಪ, ತಾಲೂಕು ಪಂಚಾಯಿತಿ ಸದಸ್ಯೆ ಶಶಿ ಪ್ರಕಾಶ್, ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪೆಮ್ಮಂಡ ಪವಿತ್ರ ಕುಂಞಪ್ಪ, ಕ್ರೀಡಾಪಟು ಬಲ್ಲಚಂಡ ಗೌತಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಭಾರ ಸಹಾಯಕ ಆಡಳಿತ ಅಧಿಕಾರಿ ಕಚೇರಿ ಅಧೀಕ್ಷಕ ಪಂದಿಯಂಡ ರಮೇಶ್, ಕಿಗ್ಗಾಲು ಚಾಮುಂಡೇಶ್ವರಿ ಯುವಕ ಸಂಘ ಅಧ್ಯಕ್ಷ ಪುದಿಯೊಕ್ಕಡ ವಿಪನ್ ಸೋಮಯ್ಯ, ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಗೌರವಾಧ್ಯಕ್ಷ ಕುಂಞಿರಾಮ, ಗ್ರಾಮ ಪಂಚಾಯಿತಿ ಸದಸ್ಯ ನಂದಕುಮಾರ್ ಇದ್ದರು.

ಸನ್ಮಾನ: ನಿವೃತ್ತ ಮುಖ್ಯ ಶಿಕ್ಷಕ ವೆಂಕಟರಮಣ ಭಟ್ ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು. ಅಲಂಕೃತ ವಾಹನ ಹಾಗೂ ಅಂಗಡಿಗಳಿಗೆ ಬಹುಮಾನ ವಿತರಿಸಲಾಯಿತು. ರಾತ್ರಿ ನಡೆದ ಸಾಂಸ್ಕೃತಿಕಕಾರ್ಯಕ್ರಮಗಳಲ್ಲಿ ಮಕ್ಕಳ ನೃತ್ಯ, ಹನಿ ಟ್ರ್ಯಾಕ್ ಮೆಲೋಡಿಸ್ ಕೂರ್ಗ್‌ ತಂಡದಿಂದ ರಸಮಂಜರಿ, ಕುಶಾಲನಗರ ಟೈಂ ಬ್ರೇಕರ್ ಡ್ಯಾನ್ಸ್ ತಂಡದ ನೃತ್ಯ ಸಭಿಕರನ್ನು ರಂಜಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.