ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಮುಂಗಾರು ಮುಂದುವರಿದ್ದು, ಮಡಿಕೇರಿಯಲ್ಲಿ ದಿನವಿಡೀ ಮಂಜು ಕವಿದ ವಾತಾವರಣವಿತ್ತು. ನಗರದ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿದಿದ್ದು, ಚಳಿಯ ಅನುಭವ ಜನತೆಗೆ ಉಂಟಾಗಿದೆ.
ಮಳೆಯ ಆರ್ಭಟಕ್ಕೆ ನಗರದ ಅಬ್ಬಿಫಾಲ್ಸ್ ರಸ್ತೆ, ಗಾಳಿಬೀಡು ಸೇರಿದಂತೆ ಹಲವು ಭಾಗಗಳಲ್ಲಿ ಸೋಮವಾರ ಸಂಜೆ ಬರೆ ಕುಸಿತ ಉಂಟಾಗಿ ರಸ್ತೆ ಸಂಚಾರ ವ್ಯತ್ಯಯವಾಯಿತು.
ಮಳೆ ಹಾನಿ: ಭಾಗಮಂಡಲ ಹೋಬಳಿಯ ತಣ್ಣಿಮಾನಿ ಗ್ರಾಮದ ಮೋಹನ್ ಎಂಬುವರ ಮನೆಯ ಹಿಂಬದಿಯ ಗೋಡೆ ಕುಸಿದಿದೆ. ತಾವೂರು ಗ್ರಾಮದ ಕೆ.ಎಂ. ಗಣಪತಿ ಅವರ ಮನೆಯ ಕಾಂಪೌಂಡ್ ಮೇಲೆ ಮರ ಬಿದ್ದು, ಹಾನಿ ಉಂಟಾಗಿದೆ.
ಮಡಿಕೇರಿಯ ತ್ಯಾಗರಾಜ ನಗರದ ಗದ್ದುಗೆ ಹಿಂಭಾಗದ ಮನೆಯೊಂದರ ತಡೆಗೋಡೆ ಹಾಗೂ ಶೌಚಾಲಯ ಕುಸಿದಿದೆ. ಸೋಮವಾರಪೇಟೆಯ ಪಟ್ಟಣದ ಮಹದೇಶ್ವರ ಬ್ಲಾಕ್‌ನಲ್ಲಿ ವಾಸದ ಮನೆಯೊಂದು ಕುಸಿದು ಬಿದ್ದಿರುವ ಬಗ್ಗೆ ವರದಿಯಾಗಿದೆ. ಯಾವುದೇ ಜೀವಹಾನಿ ಹಾನಿ ಉಂಟಾಗಿರುವ ಬಗ್ಗೆ ವರದಿಯಾಗಿಲ್ಲ.
ಜಿಲ್ಲೆಯ ಮಳೆ ವಿವರ
ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಪೂರ್ಣಗೊಂಡಂತೆ 24 ಗಂಟೆಯಲ್ಲಿ 43.88 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ 49.76 ಮಿ.ಮೀ. ಮಳೆ ದಾಖಲಾಗಿತ್ತು.ಜನವರಿಯಿಂದ ಇಲ್ಲಿಯವರೆಗೆ 604.16 ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 341.23 ಮಿ.ಮೀ ಮಳೆ ದಾಖಲಾಗಿತ್ತು.ಮಡಿಕೇರಿ ತಾಲ್ಲೂಕಿನಲ್ಲಿ 74.40 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 82.95 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 856.49 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 437.32 ಮಿ.ಮೀ. ಮಳೆಯಾಗಿತ್ತು.
ವೀರಾಜಪೇಟೆ ತಾಲ್ಲೂಕಿನಲ್ಲಿ 33.55 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 38.95 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 456.51 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 290.45ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ 23.70 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 27.37 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 9.52 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 295.92ಮಿ.ಮೀ ಮಳೆಯಾಗಿತ್ತು.
ಹೋಬಳಿವಾರು ಮಳೆ ವಿವರ
ಮಡಿಕೇರಿ ಕಸಬಾ 57.80 ಮಿ.ಮೀ., ನಾಪೋಕ್ಲು 60.20 ಮಿ.ಮೀ., ಸಂಪಾಜೆ 72.20 ಮಿ.ಮೀ., ಭಾಗಮಂಡಲ 107.40 ಮಿ.ಮೀ., ವಿರಾಜಪೇಟೆ ಕಸಬಾ 43.20 ಮಿ.ಮೀ., ಹುದಿಕೇರಿ 49.00 ಮಿ.ಮೀ., ಶ್ರಿಮಂಗಲ 44.20 ಮಿ.ಮೀ., ಪೊನ್ನಂಪೇಟೆ 39.40 ಮಿ.ಮೀ., ಅಮ್ಮತ್ತಿ 13.50 ಮಿ.ಮೀ., ಬಾಳಲೆ 12.00 ಮಿ.ಮೀ., ಸೋಮವಾರಪೇಟೆ ಕಸಬಾ 28.20 ಮಿ.ಮೀ., ಶನಿವಾರಸಂತೆ 13.80 ಮಿ.ಮೀ., ಶಾಂತಳ್ಳಿ 51.40 ಮಿ.ಮೀ., ಕೊಡ್ಲಿಪೇಟೆ 16.60 ಮಿ.ಮೀ., ಕುಶಾಲನಗರ 11.60 ಮಿ.ಮೀ., ಸುಂಟಿಕೊಪ್ಪ 20.60 ಮಿ.ಮೀ. ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.