ADVERTISEMENT

ರಂಜಿಸಿದ ನೃತ್ಯ-ಹಾಸ್ಯ-ಸಾಹಸ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 9:35 IST
Last Updated 7 ಏಪ್ರಿಲ್ 2012, 9:35 IST

ಶನಿವಾರಸಂತೆ: ಇಲ್ಲಿಯ ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರತಿವರ್ಷ ಅಂತಿಮ ಪರೀಕ್ಷೆಗಳಲ್ಲಿ ಶೇ.100 ಫಲಿತಾಂಶ ಪಡೆಯುತ್ತಾರೆ. ಕೇವಲ ಓದಿನಲ್ಲಷ್ಟೇ ಅಲ್ಲ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಇವರು ಸದಾ ಮುಂದು.

ಈಚೆಗೆ ನಡೆದ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳು ವಿವಿಧ ಬಗೆಯ ಹಾಡು, ನೃತ್ಯ, ನಾಟಕ, ಕರಾಟೆ ಪ್ರದರ್ಶನಗಳನ್ನು ನೀಡಿ ಪೋಷಕ, ಸಹಪಾಠಿ ಹಾಗೂ ಶಿಕ್ಷಕ ವೃಂದದವರ ಮನಸೂರೆಗೊಂಡರು.

ವಿದ್ಯಾರ್ಥಿನಿ ಆಶಿಯಾಬಾನು ಮತ್ತು ತಂಡದವರ ಜನಪದ ನೃತ್ಯ, ಮೇಘನಾ ಮತ್ತು ತಂಡದವರು, ಭುವನೇಶ್ವರಿ, ಪ್ರಿಯಾ ಹಾಗೂ ಇನ್ನೂ ಹಲವು ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶಿಸಿದರು.

ವಿದ್ಯಾರ್ಥಿಗಳಾದ ಯೋಗೇಂದ್ರ, ವೆಂಕಟೇಶ್, ಮಧು, ಭರತ್ ತಂಡದವರು ತರಕಾರಿಗಳನ್ನು ಬಳಸಿ ನೀಡಿದ ಸಂಗೀತ ರಸಸಂಜೆ ಅಣಕು ಕಾರ್ಯಕ್ರಮ ಪ್ರೇಕ್ಷಕರನ್ನು ನಗೆಗಡಲಲ್ಲಿ ನೇಲಿಸಿತು. ವಿದ್ಯಾರ್ಥಿ ಕರಾಟೆ ಪಟು ಭರತ್ ಮತ್ತು ತಂಡದವರ ಕರಾಟೆ ಪ್ರದರ್ಶನ ಮೈ ನವಿರೇಳಿಸಿತು. ಈ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ್ಲ್ಲೆಲ ವಿದ್ಯಾರ್ಥಿಗಳು ಸ್ವತಃ ತಾವೇ ರೂಪಿಸಿಕೊಂಡಿದ್ದು.

ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ದೇಶಕ ಉಪನ್ಯಾಸಕ ವಿವೇಕ್, ಸಾಂಸ್ಕೃತಿಕ ಕಾರ್ಯದರ್ಶಿ ಬಿ.ಬಿ.ತೀರ್ಥಾನಂದ, ಕೆ.ಎಚ್.ಯೋಗೇಂದ್ರ ಮಾರ್ಗದರ್ಶನ ನೀಡಿದ್ದಾರೆ. ವಿದ್ಯಾರ್ಥಿಗಳು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರತಿಭೆ ಮೆರೆದಿದ್ದಾರೆ.

ವಿದ್ಯಾರ್ಥಿಗಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆಲ್ಲ ಪ್ರಾಂಶುಪಾಲ ಎಸ್.ಎಂ.ಉಮಾಶಂಕರ್ ಹಾಗೂ ಉಪನ್ಯಾಸಕ ವೃಂದದವರು ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ. ಭಾರತಿ ವಿದ್ಯಾಸಂಸ್ಥೆಯ ಆಡಳಿತಮಂಡಳಿ ಅಧ್ಯಕ್ಷ ಎನ್.ಬಿ.ನಾಗಪ್ಪ, ಉಪಾಧ್ಯಕ್ಷ ಹೆಚ್.ಪಿ.ಶೇಷಾದ್ರಿ, ಕಾರ್ಯದರ್ಶಿ ಎಸ್.ಪಿ.ರಾಜ, ನಿರ್ದೇಶಕರಾದ ಬಿ.ಕೆ.ಚಿಣ್ಣಪ್ಪ, ಎನ್.ಕೆ.ಅಪ್ಪಸ್ವಾಮಿ, ಎ.ಎಂ.ಆನಂದ್, ಕೆ.ಎಂ.ಜಗನ್‌ಪಾಲ್, ಎನ್.ಜಿ.ಅರುಣ್, ಎಂ.ಯು.ಮಹ್ಮದ್‌ಪಾಶ, ಎಂ.ಪಿ.ಗಣೇಶ್, ಎಂ.ಡಿ.ದಾಳಿ.ರಂಗೂಬಾಯಿ, ಕೆ.ಪಿ.ಪುಷ್ಪಾ, ಮಾಜಿ ಅಧ್ಯಕ್ಷ ಎನ್.ಬಿ.ಗುಂಡಪ್ಪ ಮೊದಲಾದವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.

ಶನಿವಾರಸಂತೆಯ ಭಾರತಿ ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು, ಗ್ರಾಮೀಣ ಪ್ರತಿಭೆಗಳು ಅರಳಲು ಕಾರಣವಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.