ADVERTISEMENT

ವಿವಿಧೆಡೆ ದಾಳಿ: ರೂ 1.47 ಲಕ್ಷ ಮೌಲ್ಯದ ಅಕ್ರಮ ಮರಳು ವಶ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 7:14 IST
Last Updated 21 ಜೂನ್ 2013, 7:14 IST

ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಲೋಕೋಪಯೋಗಿ ಇಲಾಖಾಧಿಕಾರಿಗಳು ಬಿರುಸಿನ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ರೂ 1.47 ಲಕ್ಷ ಮೌಲ್ಯದ ಮರಳನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮವಾಗಿ ಮರಳು ದಾಸ್ತಾನು ಮಾಡಿರುವ ಬಗ್ಗೆ ದೊರೆತ ಮಾಹಿತಿ ಮೇರೆಗೆ, ಲೋಕೋಪಯೋಗಿ ಎಂಜಿನಿಯರ್ ಎಂ.ಎ. ಸುರೇಶ್, ಸಹಾಯಕ ಎಂಜಿನಿಯರ್  ಬಿ.ಆರ್. ಮಧು, ಕಿರಿಯ ಎಂಜಿನಿಯರ್ ದೇವರಾಜ್, ನಾಪೋಕ್ಲು ಕಂದಾಯ ಪರಿವೀಕ್ಷಕ ಪ್ರಕಾಶ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿತು. ದಾಳಿಯಲ್ಲಿ ಅಪಾರ ಪ್ರಮಾಣದ ಮರಳು ದೊರೆತಿದ್ದು, ಅದನ್ನು ಪಟ್ಟಣದ ಪ್ರವಾಸಿ ಮಂದಿರದ ಬಳಿ ಸಂಗ್ರಹಿಸಿ ಇಡಲಾಯಿತು.

ನಾಪೋಕ್ಲು ಪಿಎಸ್‌ಐ ಷಣ್ಮುಗಂ, ಎಎಸ್‌ಐ ಪಳಂಗಪ್ಪ ಹಾಗೂ ಸಿಬ್ಬಂದಿ ದಾಳಿ ವೇಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.