ADVERTISEMENT

ವ್ಯಾಯಾಮ, ಯೋಗ ಆರೋಗ್ಯದ ಸೂತ್ರ: ಸಚಿವ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 8:15 IST
Last Updated 8 ಅಕ್ಟೋಬರ್ 2012, 8:15 IST

ಕುಶಾಲನಗರ: ವ್ಯಾಯಾಮ, ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.

ಇಲ್ಲಿಗೆ ಸಮೀಪದ ತೊರೆನೂರು ಗ್ರಾಮದಲ್ಲಿ ಭೈರವೇಶ್ವರ ಒಕ್ಕಲಿಗರ ಸಂಘ ಮತ್ತು ಬೆಂಗಳೂರಿನ ಅಪಲೋ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ  ಹೃದಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಗ್ರಾಮೀಣ ಜನರು ಇಂತಹ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಸಂಘದ ನಾಮಫಲಕ ಅನಾವರಣ ಮಾಡಿದ ಮಾಜಿ ಸಚಿವ ಬಿ.ಎ.ಜೀವಿಜಯ ಮಾತನಾಡಿ,  ಸಂಘ ಸಂಸ್ಥೆಗಳ ಮೂಲಕ ಹಳ್ಳಿಯ ಜನರಿಗೆ ಉಪಯುಕ್ತ ಕಾರ್ಯಕ್ರಮ ಸಂಘಟಿಸಿರುವುದು ಶ್ಲಾಘನೀಯವಾದುದು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿದರು. ಸಂಘದ ಅಧ್ಯಕ್ಷ ಕೆ.ಎಸ್.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು.

ಅರಕಲಗೂಡು ಶಾಸಕ ಎ.ಮಂಜು, ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಕೆ.ವಸಂತ, ಸದಸ್ಯರಾದ ನಿಂಗಾಜಮ್ಮ, ಟಿ.ಬಿ.ಜಗದೀಶ್, ಟಿ.ಎಸ್.ರಾಜಶೇಖರ್, ಗೀತಾ, ವೈದ್ಯೆ ಡಾ ಅಮೂಲ್ಯ, ಸ್ಥಳೀಯರಾದ ಟಿ.ಪಿ.ಮಂಜುನಾಥ್, ಜಿ.ಟಿ.ಶ್ರೀನಿವಾಸ್, ಸಂಘದ ಕಾರ್ಯದರ್ಶಿ ಟಿ.ಎಲ್.ಮಹೇಶ್‌ಕುಮಾರ್ ಇತರರು ಇದ್ದರು. ಟಿ.ಪಿ.ಸೋಮಶೇಖರ್ ನಿರ್ವಹಿಸಿದರು.

ಶಿಬಿರದಲ್ಲಿ ಅಪಲೋ ಆಸ್ಪತ್ರೆಯ ನುರಿತ ತಜ್ಞರಾದ ಕಿರಣ್‌ಶೇಖರ್, ಪಾರಸ್ ನೇತೃತ್ವದ ವೈದ್ಯರ ತಂಡ ತಪಾಸಣೆ ನಡೆಸಿತು. ಶಿಬಿರದಲ್ಲಿ 650 ಮಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.