ADVERTISEMENT

ಸಾಧನೆಯ ಹಾದಿಯಲ್ಲಿ ಕೂರ್ಗ್ ತಾಂತ್ರಿಕ ಕಾಲೇಜು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 9:35 IST
Last Updated 12 ಫೆಬ್ರುವರಿ 2011, 9:35 IST

ಗೋಣಿಕೊಪ್ಪಲು: ಸುತ್ತಲು ಪ್ರಕೃತಿಯ ಹಸಿರು ಸಂಪತ್ತನ್ನು ಹೊದ್ದು ಮಲಗಿರುವ ಮಲೆನಾಡ ಮಡಿಲಿನ ಪೊನ್ನಂಪೇಟೆ ಹಳ್ಳಿಗಟ್ಟು ಕೂರ್ಗ್ ತಾಂತ್ರಿಕ ಕಾಲೇಜು ನೂತನ ಕೋರ್ಸ್‌ಗಳನ್ನು ತೆರೆಯುವ ಮೂಲಕ ಪ್ರಗತಿಯ ಹಾದಿಯಲ್ಲಿ ಮುನ್ನುಗ್ಗುತ್ತಿದೆ.ಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್, ಇನ್‌ಫಾರ್ಮೇಷನ್ ಸೈನ್ಸ್, ಟೆಲಿ ಕಮ್ಯೂನಿಕೇಷನ್ ವಿಭಾಗಗಳಿದ್ದು ಇವುಗಳ ಜತೆಗೆ ನೂತನವಾಗಿ  ಮೆಕಾನಿಕಲ್ ಎಂಜಿಯರಿಂಗ್ ವಿಭಾಗವನ್ನು ತೆರೆಯಲಾಗಿದೆ.

1997ರಲ್ಲಿ ಜಿಲ್ಲೆಯ ಶಿಕ್ಷಣ ಭೀಷ್ಮ ಡಾ.ಎಂ.ಎಂ.ಚಂಗಪ್ಪ ಅವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಕೊಡವ ಎಜುಕೇಷನ್ ಸೊಸೈಟಿ ತಾಂತ್ರಿಕ ಕಾಲೇಜನ್ನು ಸ್ಥಾಪಿಸಿ ಉತ್ತಮ ಶಿಕ್ಷಣ ನೀಡುತ್ತಿದೆ. ಇದೀಗ ಮೆಕಾನಿಕಲ್ ಕೋರ್ಸ್‌ಗೆ ಅಗತ್ಯವಿರುವ ಅತ್ಯಾಧುನಿಕ ಮಾದರಿಯ ಕಟ್ಟಡವನ್ನು ರೂ. 7 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸಂಸ್ಥೆಯಲ್ಲಿ ಅನುಭವಿ ಹಾಗೂ ಪ್ರತಿಭಾವಂತ ಬೋಧಕ ವೃಂದವಿದೆ. ಶಿಕ್ಷಣವನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಣ ಗೊಳಿಸಲಾಗಿದೆ. 380 ಕಂಪ್ಯೂಟರ್‌ಗಳಿದ್ದು, ಗ್ರಂಥಾಲಯದಲ್ಲಿ 30 ಸಾವಿರ ಪುಸ್ತಕಗಳಿವೆ.ವಿಸ್ತಾರವಾದ ಕ್ಯಾಂಪಸ್‌ನಲ್ಲಿ 2 ಹಾಕಿ ಮೈದಾನ, ಫುಟ್‌ಬಾಲ್ ಮೈದಾನ, ಟೇಬಲ್ ಟೆನೀಸ್, ಜಿಮ್ ಮೊದಲಾದ  ಕ್ರೀಡಾ ಸೌಕರ್ಯಗಳಿವೆ.

ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮಾಹಿತಿಯನ್ನು ಎಸ್‌ಎಂಎಸ್ ಮೂಲಕ ನೀಡಲಾಗುತ್ತಿದೆ. ಸ್ಮಾರ್ಟ್‌ ಕ್ಯಾಂಪಸ್ ಸಿಸ್ಟಮ್ ಜಾರಿಗೆ ತರಲು ಆಡಳಿತ ಮಂಡಳಿ ಚಿಂತಿಸುತ್ತಿದೆ.ಮಾಲಿನ್ಯ ರಹಿತ ಹಸಿರು ಪರಿಸರ ನಿರ್ಮಾಣ ಮಾಡುವ ಕಡೆಗೆ ಗಂಭೀರ ಪ್ರಯತ್ನ ನಡೆಸಿದೆ. ವಿದ್ಯಾರ್ಥಿಗಳ ವಸತಿ ನಿಲಯದಿಂದ ಹೊರಬಂದ ನೀರನ್ನು ಹೂತೋಟ ಮತ್ತಿತರ ಹಸಿರು ಗಿಡಗಳಿಗೆ ಬಳಸಿಕೊಂಡು ಸುಂದರ ಹೋ ತೋಟ ತಲೆ ಎತ್ತಿದೆ. ಅಂತರ್ಜಲ ರಕ್ಷಣೆ ಮತ್ತು ಹೂತೋಟಗಳ ಅಭಿವೃದ್ಧಿಗಾಗಿ ಅಲ್ಲಲ್ಲೆ ಕೆರೆಗಳನ್ನು ನಿರ್ಮಿಸಲಾಗಿದೆ.

ಕಾಲೇಜಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಸಿ.ಪಿ.ಬೆಳ್ಳಿಯಪ್ಪ ಇದೀಗ ಕಾಲೇಜಿನಲ್ಲಿ 817 ವಿದ್ಯಾರ್ಥಿಗಳಿದ್ದಾರೆ. ವಸತಿ ನಿಲಯದಲ್ಲಿ 541 ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ 318 ಬಾಲಕಿಯರಿದ್ದರೆ, 223 ಬಾಲಕರಿದ್ದಾರೆ. 2009 ಮತ್ತು 10ನೇ ಸಾಲಿನಲ್ಲಿ 6 ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳಲ್ಲಿ ರಾಜ್ಯದಲ್ಲಿ ಮೊದಲ 8 ರ್ಯಾಂಕುಗಳನ್ನು ಪಡೆದುಕೊಂಡಿದ್ದಾರೆ. ಇನ್ಫೋಸಿಸ್, ಭೂಸೇನೆ ಸೇರಿದಂತೆ ವಿವಿಧ ಕಂಪನಿಗಳಿಗೆ 42 ಮಂದಿ ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ ಎಂದರು.

26 ವಿದ್ಯಾರ್ಥಿಗಳು ವಿವಿಧ ಕಂಪನಿಗಳಲ್ಲಿ  ದ್ಯೋಗ ಪಡೆದು ಉನ್ನತ ಅಧಿಕಾರಿಗಳಾಗಿ ಕೆಲಸ ನಿರ್ವಹಿಸುತಿದ್ದಾರೆ ಎಂದು ನುಡಿದರು. ಕೊಡವ ಎಜುಕೇಷನ್ ಸೊಸೈಟಿಯಲ್ಲಿ 642 ಸದಸ್ಯರಿದ್ದು 19 ಮಂದಿ ಆಡಳಿತ ಮಂಡಳಿಯಲ್ಲಿ  ದಕ್ಷತೆಯಿಂದ ಕಾರ್ಯನಿರ್ವಹಿಸುತಿದ್ದಾರೆ. ರಾಜ್ಯದಲ್ಲಿಯೇ ಮಾದರಿ ತಾಂತ್ರಕ ಕಾಲೇಜು ರೂಪಿಸಬೇಕು ಎಂಬ ಮಹದಾಸೆ ಇದೆ. ಇಲ್ಲಿನ ಪರಿಸರಕ್ಕೆ ಮನಸೋತ ಬಹಳಷ್ಟು ಹೊರಗಿನ ವಿದ್ಯಾರ್ಥಿಗಳು ಪ್ರವೇಶ ಬಯಸಿ ಬರುತಿದ್ದಾರೆ ಎಂದು  ಹೆಮ್ಮೆಯಿಂದ ಹೇಳಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.