ಕುಶಾಲನಗರ: ರೈತರು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿ ಕೊಳ್ಳುವ ಮೂಲಕ ಅಧಿಕ ಇಳುವರಿ ಪಡೆದು ತಮ್ಮ ಆರ್ಥಿಕಮಟ್ಟವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಸೋಮವಾರಪೇಟೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಶರಣಪ್ಪ ಇಲ್ಲಿ ಕರೆ ನೀಡಿದರು. ಜಿಲ್ಲಾ ತೋಟಗಾರಿಕಾ ಇಲಾಖೆ ಮತ್ತು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಹಾಗೂ ಮೈಸೂರಿನ ಮಹಾತ್ಮಗಾಂಧಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಗುರುವಾರ ಏಳನೇ ಹೊಸಕೋಟೆಯಲ್ಲಿ ರೈತರಿಗೆ ಏರ್ಪಡಿಸಿದ್ದ ಸಾವಯವ ಕೃಷಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸುತ್ತೂರು ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಕೃಷಿ ತಜ್ಞ ಡಾ. ಜೆ.ಜಿ.ರಾಜಣ್ಣ ಮಣ್ಣು ಮತ್ತು ನೀರಿನ ಸಂರಕ್ಷಣೆ ಕುರಿತು ಮಾತನಾಡಿದರು. ಮೈಸೂರು ನಾಗನಹಳ್ಳಿ ಸಾವಯವ ಸಂಶೋದನಾ ಕೇಂದ್ರದ ಸಾವಯವ ತಜ್ಞ ಡಾ. ದೇವರಾಜು ಮಾತನಾಡಿ, ರೈತರು ರಾಸಾಯನಿಕ ಗೊಬ್ಬರವನ್ನು ಕೃಷಿ ಚಟುವಟಿಕೆಯಲ್ಲಿ ಬಳಸದೆ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಸಹಾಯಕ ತೋಟಗಾರಿಕಾ ಅಧಿಕಾರಿ ಗೋಪಾಲ್, ಸಾವಯವ ಕೃಷಿಕರಾದ ಡಿ.ಸಿ.ಜಯರಾಜ್, ಎ.ಎಂ.ಕಾರ್ಯಪ್ಪ, ಬಿ.ಎಸ್.ಬಾಲಕೃಷ್ಣ ರೈ, ದಾಸಂಡ ರಮೇಶ್, ಡಿ.ಬಿ.ಜಗದೀಶ್ ಮಾದಪ್ಪ, ಡಿ.ಪಿ.ಬೋಪಯ್ಯ, ಮಹಾತ್ಮಗಾಂಧಿ ಟ್ರಸ್ಟ್‌ನ ಕಾರ್ಯಕರ್ತರಾದ ಎಸ್.ಎಸ್.ತ್ಯಾಗರಾಜು, ಎಂ.ರಮೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.