ADVERTISEMENT

ಹಸಿರು ಪರಿಸರ ಅಭಿವೃದ್ಧಿಗೆ ಪೂರಕ: ಕುಶಾಲಪ್ಪ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 6:31 IST
Last Updated 2 ಸೆಪ್ಟೆಂಬರ್ 2013, 6:31 IST

ಗೋಣಿಕೊಪ್ಪಲು: ಪರಿಸರ ಸಂರಕ್ಷಣೆ ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ. ಕಲುಷಿತಗೊಳ್ಳುತ್ತಿರುವ ವಾತಾವರಣವನ್ನು ಶುದ್ಧಗೊಳಿಸದಿದ್ದರೆ ಜೀವ ಜಂತುಗಳ ಆರೋಗ್ಯಕರ ಬದುಕು ಹದಗೆಡಲಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ಕುಶಾಲಪ್ಪ ಹೇಳಿದರು.

ಸಮೀಪದ ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಘಟಕದ ವಾರ್ಷಿಕ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಅವರು ಉದ್ಘಾಟಿಸಿದರು.

ಹಸಿರು ಜೀವ ಜಂತುಗಳ ಉಸಿರು. ಇದನ್ನು ಮನಗಾಣದ ಮನಷ್ಯ ಹಸಿರಿಗೆ ನಿತ್ಯವೂ ಕೊಡಲಿ ಪೆಟ್ಟು ನೀಡುತ್ತಿದ್ದಾನೆ. ಮತ್ತೊಂದು ಕಡೆ ಆಧುನಿಕ ಸೌಲಭ್ಯ ಮತ್ತು ಅಭಿವೃದ್ಧಿಯೂ ಕೂಡ ಪರಿಸರ ನಾಶಕ್ಕೆ ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ತಮ್ಮ ಮನೆ ಸುತ್ತ ಮುತ್ತ ಹಾಗೂ ಶಾಲಾ ಕಾಲೇಜಿನ ಆವರಣದಲ್ಲಿ ಗಿಡ  ನೆಡುವ ಮೂಲಕ ಹಸಿರು ವಾತಾವರಣ ನಿರ್ಮಿಸಬೇಕು. ಆ ಮೂಲಕ  ಸಮಾಜದಲ್ಲಿ  ಪರಿಸರ  ಜಾಗೃತಿ ಮೂಡಿಸಬೇಕು. ದೇಶದ ಅಭಿವೃದ್ಧಿಯಲ್ಲಿ ಆರೋಗ್ಯಕರ ಪರಿಸರ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.
 
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಡ್ಡಂಡ ಕಾರ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಶಿವಲಿಂಗ ಶೆಟ್ಟಿ, ಕಾರ್ಯಕ್ರಮ ಅಧಿಕಾರಿ ಎಚ್.ಎನ್. ಮಹದೇವಸ್ವಾಮಿ, ಸಿದ್ದಲಿಂಗಸ್ವಾಮಿ, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ವಿಶ್ವನಾಥ್, ಉಪನ್ಯಾಸಕರಾದ ಆರ್. ರಮೇಶ್, ಶಶಿಕುಮಾರ್, ಗೋಪಿನಾಥ್, ಹರೀಶ್, ರಾಜೇಂದ್ರ ಪ್ರಸಾದ್, ಎಂ.ಎಸ್. ಗೀತಾ ಮುಂತಾದವರು ಹಾಜರಿದ್ದರು.

ತಮ್ಮಯ್ಯ ಸ್ವಾಗತಿಸಿದರು. ಡಾ. ಪ್ರಭು ವಂದಿಸಿದರು. ಎನ್‌ಎಸ್‌ಎಸ್ ನಾಯಕರಾದ ಪ್ರೀಕ್ಷಿತ, ಮಮಿತಾ, ಶಿವರಂಜನಿ, ಅರ್ಜುನ್, ಅಯ್ಯಪ್ಪ, ವಿ. ಶ್ವೇತಾ  ಕಾರ್ಯಕ್ರಮ ನಿರೂಪಿಸಿದರು.

ಅಡುಗೆ ಕೋಣೆ ನಿರ್ಮಾಣಕ್ಕೆ ಚಾಲನೆ
ಸೋಮವಾರಪೇಟೆ: ರಾಷ್ಟ್ರೀಯ ಮಾಧ್ಯಮಿಕ ಯೋಜನೆಯಡಿ ಇಲ್ಲಿಗೆ ಸಮೀಪದ ಮಾದಾಪುರದ ಡಿ.ಚೆನ್ನಮ್ಮ ಕಾಲೇಜಿನ ಸಮೀಪ ಪ್ರೌಢಶಾಲಾ ವಿಭಾಗಕ್ಕೆ ಹೊಂದಿಕೊಂಡಂತೆ ಇರುವ ರೂ. 4,20,000 ವೆಚ್ಚದ ನೂತನ ಅಡುಗೆ ಕೋಣೆ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಟಿ.ಜಿ. ಸತೀಶ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಕರ್ನಲ್ ಬಿ.ಜಿ.ವಿ. ಕುಮಾರ್, ಅನಿಲ್ ಪೊನ್ನಪ್ಪ, ಎಂ.ಬಿ. ಬೋಪಣ್ಣ, ಸಿ.ಟಿ. ಮುದ್ದಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.