
ಪ್ರಜಾವಾಣಿ ವಾರ್ತೆ
ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಸಮೀಪ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದಲ್ಲಿ ಅಪರಾಧಿ, ಕೇರಳದ ಎ.ಕೆ.ಗಿರೀಶ್ (39) ಎಂಬಾತನಿಗೆ ವಿರಾಜಪೇಟೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಮರಣದಂಡನೆ ವಿಧಿಸಿದೆ. ಕೃತ್ಯ ನಡೆದ 9 ತಿಂಗಳಿನಲ್ಲಿ ಶಿಕ್ಷೆ ಪ್ರಕಟವಾಗಿದೆ.
2025ರ ಮಾರ್ಚ್ 27ರಂದು ಅಕ್ರಮ ಸಂಬಂಧ ಶಂಕೆಯಡಿ ಪತ್ನಿ ನಾಗಿ (30), ಆಕೆಯ ರಕ್ಷಣೆಗೆ ಬಂದಿದ್ದ ಆಕೆಯ ಅಜ್ಜ ಕರಿಯ (75), ಅಜ್ಜಿ ಗೌರಿ (75), ನಾಗಿ ಅವರ ಪುತ್ರಿ ಕಾವೇರಿ (5) ಅವರನ್ನೂ ಕೊಲೆ ಮಾಡಿದ್ದ.
ತನಿಖಾಧಿಕಾರಿಗಳಾದ ಶಿವರುದ್ರ ಹಾಗೂ ಶಿವರಾಜ್ ಆರ್ ಮುದೋಳ್ ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಸ್.ನಟರಾಜ್ ಅವರು ಮರಣದಂಡನೆ ಹಾಗೂ ₹ 10 ಸಾವಿರ ದಂಡ ವಿಧಿಸಿ ಆದೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.