ADVERTISEMENT

70 ಸಾವಿರ ಮೌಲ್ಯದ ಮರದ ದಿಮ್ಮಿ ವಶ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 7:56 IST
Last Updated 5 ಏಪ್ರಿಲ್ 2013, 7:56 IST

ಕುಶಾಲನಗರ: ಕಾಡಿನಿಂದ ಅಕ್ರಮವಾಗಿ ಕಡಿದು ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು 70 ಸಾವಿರ ಬೆಲೆ ಬಾಳುವ ಬಳಂಜಿ ಹಾಗೂ ಕಾಡು ಜಾತಿಯ ಮರದ ದಿಮ್ಮಿಗಳನ್ನು ಕುಶಾಲನಗರ ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯೊಂದಿಗೆ ಗುರುವಾರ ಮುಂಜಾನೆ ಮರಗಳನ್ನು ತುಂಬಿದ್ದ ವಾಹನದ ಬೆನ್ನಟ್ಟಿದ ಕುಶಾಲನಗರ ಪೊಲೀಸರು, ಕೂಡ್ಲೂರಿನ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಮಾಲು ಸಮೇತ ವಾಹನವನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ವಿವಿಧ ಗಾತ್ರ ಹಾಗೂ ಉದ್ದದ 53 ಬಳಂಜಿ ಮತ್ತು ಕಾಡು ಜಾತಿಯ 15 ಮರದ ನಾಟಗಳು ಸೇರಿದಂತೆ ಒಟ್ಟು 68 ಮರದ ನಾಟಗಳನ್ನು ಪೊಲೀಸರು ವಶಪಡಿಸಿಕೊಂಡರು.

ಪೊಲೀಸರು ತಮ್ಮನ್ನು ಬೆನ್ನಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ವಾಹನ ಚಾಲಕ ಹಾಗೂ ವಾಹನದಲ್ಲಿದ್ದವರು ವಾಹನವನ್ನು ಒಂದು ಸ್ಥಳದಲ್ಲಿ ನಿಲ್ಲಿಸಿ ಪರಾರಿಯಾಗಿದ್ದಾರೆ. ಹೀಗಾಗಿ ವಾಹನವು ಯಾರಿಗೆ ಸೇರಿದ್ದು ಎಂಬುದು ತಿಳಿದು ಬಂದಿಲ್ಲ.

ಕಾರ್ಯಾಚರಣೆಯಲ್ಲಿ ಪಿಎಸ್‌ಐ ಆನಂದಕುಮಾರ್, ಎಎಸ್‌ಐ ಅಯ್ಯಪ್ಪ, ಮುಖ್ಯ ಪೇದೆ ರವಿಕುಮಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.