ೆ
ಮಡಿಕೇರಿ: ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪಡೆದ ‘ಹಾರ್ಟ್ ಲ್ಯಾಂಪ್’ (ಮೂಲ: ಬಾನು ಮುಷ್ತಾಕ್ ಅವರ ‘ಎದೆಯ ಹಣತೆ) ಕೃತಿಯು 2 ತಿಂಗಳಿನಲ್ಲಿ 70ಸಾವಿರ ಪ್ರತಿ ಮುದ್ರಣಗೊಂಡಿದೆ ಎಂದು ಅನುವಾದಕಿ ದೀಪಾ ಭಾಸ್ತಿ ತಿಳಿಸಿದರು.
ಕೊಡಗು ಪತ್ರಕರ್ತರ ಸಂಘವು ಇಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಮೆಜಾನ್‌ನಂತಹ ವೇದಿಕೆಯಲ್ಲಿ ಸತತ ಮೂರು ವಾರಗಳವರೆಗೆ ಎಲ್ಲ ವಿಭಾಗದಲ್ಲೂ ಈ ಕೃತಿ ಮಾರಾಟದಲ್ಲಿ ಮೊದಲ ಸ್ಥಾನ ಪಡೆದಿತ್ತು. ಎಲ್ಲೆಡೆಯಿಂದ ಈ ಕೃತಿಗೆ ಬೇಡಿಕೆ ಬರುತ್ತಿದೆ. ‘ಹಾರ್ಟ್ ಲ್ಯಾಂಪ್’ ಕೃತಿಯನ್ನು ಮಲಯಾಳಿ, ಅಸ್ಸಾಮಿ ಹಾಗೂ ಒಡಿಯಾ ಭಾಷೆಗಳಿಗೆ ಭಾಷಾಂತರಿಸಲು ಅನುಮತಿ ನೀಡಿರುವೆ. ಇನ್ನಷ್ಟು ಭಾಷೆಗಳಿಂದ ಭಾಷಾಂತರಕ್ಕಾಗಿ ಕೋರಿಕೆಗಳು ಬರುತ್ತಿವೆ’ ಎಂದು ಹೇಳಿದರು.
‘ಕನ್ನಡದಲ್ಲಿ ಭಾಷಾಂತರ ಕ್ಷೇತ್ರ ಇನ್ನಷ್ಟು ಬೆಳೆಯಬೇಕಿದೆ. ಕನ್ನಡದ ಕೃತಿಗಳು ಇತರ ಭಾಷೆಗಳಿಗೆ, ಇತರ ಭಾಷೆಗಳ ಕೃತಿಗಳು ಕನ್ನಡಕ್ಕೆ ಅನುವಾದಗೊಳ್ಳಬೇಕು. ಆದರೆ, ಭಾರತದ ಇತರ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಭಾಷಾಂತರದ ಪ್ರಮಾಣ ಕಡಿಮೆ ಇದೆ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.