ADVERTISEMENT

ಕಂಬಿಬಾಣೆಯಲ್ಲಿ ಅದ್ದೂರಿ ಶೋಭಾ‌ಯಾತ್ರೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 5:13 IST
Last Updated 14 ಅಕ್ಟೋಬರ್ 2024, 5:13 IST
ಸುಂಟಿಕೊಪ್ಪ ಸಮೀಪದ ಕಂಬಿಬಾಣೆ ಶ್ರೀರಾಮ ಮತ್ತು ಚಾಮುಂಡೇಶ್ವರಿ ದೇವಸ್ಥಾನ ಸಮಿತಿಯಿಂದ ದಸರಾ ಮತ್ತು ವಿಜಯದಶಮಿ ಉತ್ಸವದ ಅಂಗವಾಗಿ ಶನಿವಾರ ರಾತ್ರಿ ಶೋಭಾಯಾತ್ರೆ ನಡೆಯಿತು
ಸುಂಟಿಕೊಪ್ಪ ಸಮೀಪದ ಕಂಬಿಬಾಣೆ ಶ್ರೀರಾಮ ಮತ್ತು ಚಾಮುಂಡೇಶ್ವರಿ ದೇವಸ್ಥಾನ ಸಮಿತಿಯಿಂದ ದಸರಾ ಮತ್ತು ವಿಜಯದಶಮಿ ಉತ್ಸವದ ಅಂಗವಾಗಿ ಶನಿವಾರ ರಾತ್ರಿ ಶೋಭಾಯಾತ್ರೆ ನಡೆಯಿತು   

ಸುಂಟಿಕೊಪ್ಪ: ಸಮೀಪದ ಕಂಬಿಬಾಣೆ ರಾಮ ಮತ್ತು ಚಾಮುಂಡೇಶ್ವರಿ ದೇವಸ್ಥಾನ ಸಮಿತಿಯಿಂದ 69ನೇ ವರ್ಷದ ದಸರಾ ಮತ್ತು ವಿಜಯದಶಮಿ ಉತ್ಸವವು ವಿಜೃಂಭಣೆಯಿಂದ ಶನಿವಾರ ರಾತ್ರಿ ನಡೆಯಿತು.

ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರ ಪೂಜೆ ನಂತರ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದೊಂದಿಗೆ ವಾದ್ಯಗೋಷ್ಠಿ, ನಾದಸ್ವರದೊಂದಿಗೆ ಭವ್ಯ ಶೋಭಯಾತ್ರೆ ನಡೆಯಿತು.

ಈ ಮದ್ಯೆ ಚಿಕ್ಲಿಹೊಳೆ ಜಲಾಶಯದ ಬಳಿಯ ಚಾಮುಂಡೇಶ್ವರಿ ದೇವಾಲಯದ ಡಿಜೆಯೊಂದಿಗೆ ಅಲಂಕೃತ ಮಂಟಪ ಇದರೊಂದಿಗೆ ಸೇರಿಕೊಂಡು ಮೆರವಣಿಗೆಗೆ ಇನ್ನಷ್ಟು ಮೆರುಗು ನೀಡಿತು.

ADVERTISEMENT

ಕಂಬಿಬಾಣೆಯ ಎಲ್ಲ ಬೀದಿಗಳಲ್ಲಿ ಸಂಚರಿಸಿದ ಈ 2 ಮಂಟಪಗಳ ದೇವರಿಗೆ ಭಕ್ತರು ಪೂಜೆ ಸಲ್ಲಿಸಿ, ಹಣ್ಣು– ಕಾಯಿ ಅರ್ಪಿಸಿ ಸಂತೃಪ್ತ ಭಾವ ಮೆರೆದರು.

ಡಿಜೆಯ ಹಾಡಿಗೆ ಯುವಕ- ಯುವತಿಯರು ಕುಣಿದು ಕುಪ್ಪಳಿಸಿದರು. ಭಾನುವಾರ ಮುಂಜಾನೆಯವರೆಗೆ ನಡೆದ ಮೆರವಣಿಗೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನ ಭಾಗವಹಿಸಿದ್ದರು.

ದೇವಾಲಯದ ವತಿಯಿಂದ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಭಾನುವಾರ ಮುಂಜಾನೆ ರಾಮ ಮತ್ತು ಚಾಮುಂಡಿಗೆ ಮಹಾಪೂಜೆಯನ್ನು ಅರ್ಚಕ ಪ್ರಭಾಕರ್ ಕುದ್ಧಣ್ಣಯ್ಯ ಅವರು ನೆರವೇರಿಸುವ ಮೂಲಕ 10 ದಿನಗಳ ನವರಾತ್ರಿ ಉತ್ಸವ ಸಂಪನ್ನಗೊಂಡಿತು.

ದೇವಾಲಯದ ಡಾ.ಶಶಿಕಾಂತ್ ರೈ, ರವಿ, ಸಮಿತಿಯ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.