ADVERTISEMENT

ಯತೀಕ್‌ ಹ್ಯಾಟ್ರಿಕ್‌: ಸಣ್ಣುವಂಡ ತಂಡಕ್ಕೆ ಜಯ

ಕೊಡವ ಕೌಟುಂಬಿಕ ಹಾಕಿ ಟೂರ್ನಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 18:24 IST
Last Updated 15 ಏಪ್ರಿಲ್ 2025, 18:24 IST
ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಮಂಗಳವಾರ ಮುಕ್ಕಾಟಿರ (ಹರಿಹರ) ಮತ್ತು ಬಯವಂಡ ತಂಡದ ಆಟಗಾರರು ಸೆಣೆಸಿದರು
ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಮಂಗಳವಾರ ಮುಕ್ಕಾಟಿರ (ಹರಿಹರ) ಮತ್ತು ಬಯವಂಡ ತಂಡದ ಆಟಗಾರರು ಸೆಣೆಸಿದರು   

ಮಡಿಕೇರಿ: ಯತೀಕ್ ಅಯ್ಯಪ್ಪ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಸಣ್ಣುವಂಡ ತಂಡವು ಇಲ್ಲಿನ ಫೀಲ್ಡ್‌ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ‘ಮುದ್ದಂಡ ಕಪ್‌’ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಮಂಗಳವಾರ ಚೆರುವಾಳಂಡ ವಿರುದ್ಧ 4–1 ಗೋಲುಗಳ ಅಂತರದಿಂದ ಗೆಲುವು ದಾಖಲಿಸಿತು.

ಮತ್ತೊಂದು ಪಂದ್ಯದಲ್ಲಿ ಅಪ್ಪಚ್ಚು ಅವರ 4 ಗೋಲುಗಳ ನೆರವಿನಿಂದ ಸೋಮೆಯಂಡ 5-1 ಅಂತರದಿಂದ ಅಲ್ಲಾರಂಡ ವಿರುದ್ಧ  ಜಯ ಗಳಿಸಿತು.

ಕಲಿಯಂಡ 5-0 ರಿಂದ ಓಡಿಯಂಡ ವಿರುದ್ಧ, ಕರವಂಡ 2-1ರಿಂದ ಕರಿನೆರವಂಡ ವಿರುದ್ಧ, ಬಯವಂಡ 3-1 ರಿಂದ ಮುಕ್ಕಾಟಿರ (ಹರಿಹರ) ವಿರುದ್ಧ, ಕಾಯಪಂಡ 2-0ರಿಂದ ಮಾಳೇಟಿರ (ಕುಕ್ಲೂರು) ವಿರುದ್ಧ, ಮೇಕೇರಿರ 1-0ಯಿಂದ ಬಲ್ಲಚಂಡ ವಿರುದ್ಧ, ಅಂಜಪರವಂಡ 5-0ಯಿಂದ ಅಯ್ಯನೆರವಂಡ ವಿರುದ್ಧ ಗೆಲುವು ಪಡೆಯಿತು.

ADVERTISEMENT

ಟೈಬ್ರೇಕರ್‌ ಹಣಾಹಣಿಯಲ್ಲಿ ನಂಬುಡಮಾಡ 4-3ರಿಂದ ಚೊಟ್ಟೆಯಂಡಮಾಡ ವಿರುದ್ಧ ಗೆಲುವು ಸಾಧಿಸಿತು.

ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಮಂಗಳವಾರ ಮುಕ್ಕಾಟಿರ (ಹರಿಹರ) ಮತ್ತು ಬಯವಂಡ ತಂಡದ ಆಟಗಾರರು ಸೆಣೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.