ADVERTISEMENT

ಕುಶಾಲನಗರ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಶೇಷ ಜೋಡಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 3:12 IST
Last Updated 20 ಜೂನ್ 2022, 3:12 IST
ಕುಶಾಲನಗರ ಸಮೀಪದ ಗುಡ್ಡೆನಹಳ್ಳಿ ಚೌಡೇಶ್ವರಿ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ– ಅಂಜಲಿ ಜೋಡಿ
ಕುಶಾಲನಗರ ಸಮೀಪದ ಗುಡ್ಡೆನಹಳ್ಳಿ ಚೌಡೇಶ್ವರಿ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ– ಅಂಜಲಿ ಜೋಡಿ   

ಕುಶಾಲನಗರ: ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೇನಹಳ್ಳಿ ಚೌಡೇಶ್ವರಿ ದೇವಾಲಯದಲ್ಲಿ ಭಾನುವಾರ ಕಿವುಡ ಹಾಗೂ ಮೂಗರಾದ ಟಿ.ಸಿ.ಧನಂಜಯ ಹಾಗೂ ಬಿ.ಎಂ.ಅಂಜಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಧನಂಜಯ ಸೀಗೆಹೊಸೂರು ಗ್ರಾಮದ ಶ್ರೀನಿವಾಸ್ ಹಾಗೂ ಭಾಗ್ಯಮ್ಮ ದಂಪತಿ ಪುತ್ರ. ಬೈಲುಕುಪ್ಪೆ ಬಳಿ ಲಕ್ಷ್ಮೀಪುರದ ಕೆ.ರಮೇಶ್ ಮತ್ತು ಪುಷ್ಪಾ ದಂಪತಿ ಪುತ್ರಿ ಬಿ.ಎಂ.ಅಂಜಲಿ. ಹಿರಿಯರ ಸಮ್ಮುಖದಲ್ಲಿ ಮದುವೆಯಾದರು.

ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ರಾಜ್ಯ ಅಂಗವಿಕಲರ ಪರಿಷತ್‌ ಅಧ್ಯಕ್ಷ ಡಿ.ಕೆ.ಸುರೇಶ್ ಕುಮಾರ್‌ ಮಾತನಾಡಿ, ‘ಹುಟ್ಟುತ್ತಲೇ ಶ್ರವಣದೋಷ ಸಮಸ್ಯೆ ಎದುರಿಸುತ್ತಿದ್ದ ಧನಂಜಯ ಹಾಗೂ ಅಂಜಲಿ ಪರಸ್ಪರ ಒಪ್ಪಿ ವಿವಾಹವಾಗುತ್ತಿರುವುದು ಸಂತೋಷವಾಗಿದೆ. ಇಂತಹ ವಿವಾಹಗಳಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ. ನವ ಜೋಡಿಯ ಮುಂದಿನ ಜೀವನ ಸುಖ, ಸಮೃದ್ಧಿಯಿಂದ ಕೂಡಿರಲಿ’ ಎಂದು ಶುಭ ಹಾರೈಸಿದರು.

ADVERTISEMENT

ವಿಕಲಚೇತನರ ಕ್ಷೇಮಾಭಿವೃದ್ಧಿ ಕ್ಲಬ್‌ನಿಂದ ಧನಂಜಯ ಹಾಗೂ ಅಂಜಲಿ ತಾಯಿ ಅವರಿಗೆ ತಲಾ ₹5 ಸಾವಿರ ನೆರವು ನೀಡಲಾಯಿತು.

ಕ್ಲಬ್ ಕಾರ್ಯದರ್ಶಿ ಲತೇಶ್ ಕುಮಾರ್, ಪತ್ರಕರ್ತ ಎಸಳೂರು ಉದಯಕುಮಾರ್, ನಿರ್ದೇಶಕ ಎಂ.ಸಿ.ಸಚಿನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.