ADVERTISEMENT

ಅನನ್ಯಾ ಭಟ್ ಫೋಟೋ ನನ್ನ ತಂಗಿಯದ್ದು: ಆರೋಪ

ವಿರಾಜಪೇಟೆಯ ವಿಜಯ್ ಎಂಬುವವರ ಆರೋಪ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 20:38 IST
Last Updated 20 ಆಗಸ್ಟ್ 2025, 20:38 IST
<div class="paragraphs"><p>ಪೊಲೀಸ್&nbsp; – ಪ್ರಾತಿನಿಧಿಕ ಚಿತ್ರ</p></div>

ಪೊಲೀಸ್  – ಪ್ರಾತಿನಿಧಿಕ ಚಿತ್ರ

   

ಮಡಿಕೇರಿ: ‘2003ರಲ್ಲಿ ತಮ್ಮ ಮಗಳು ಅನನ್ಯಾ ಭಟ್ ಧರ್ಮಸ್ಥಳದಿಂದ ನಾಪತ್ತೆಯಾಗಿದ್ದು ಈವರೆಗೆ ಪತ್ತೆಯಾಗಿಲ್ಲ ಎಂದು ಮಹಿಳೆಯೊಬ್ಬರು ಬಿಡುಗಡೆ ಮಾಡಿರುವ ಫೋಟೋ ನನ್ನ ತಂಗಿ ವಸಂತಿಯದ್ದು’ ಎಂದು ವಿರಾಜಪೇಟೆ ನಿವಾಸಿ ವಿಜಯ್ ಎಂಬುವವರು ಆರೋಪಿಸಿದ್ದಾರೆ.

‘ವಸಂತಿ ಬೆಂಗಳೂರಿನಲ್ಲಿ ಶುಶ್ರೂಷಕಿಯಾಗಿದ್ದಾಗ ಶ್ರೀವತ್ಸ ಎಂಬುವವರೊಂದಿಗೆ ಮದುವೆಯಾಗಿತ್ತು. ನಂತರ, 2007ರಲ್ಲಿ ಆಕೆಯ ಮೃತದೇಹವು ಇಲ್ಲಿನ ಕೆದಮುಳ್ಳೂರು ಸಮೀಪದ ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈಗ ಮಹಿಳೆಯೊಬ್ಬರು ಆಕೆಯ ಫೋಟೋ ತೋರಿಸಿ ತಮ್ಮ ಮಗಳು ಎನ್ನುತ್ತಿರುವುದು ಅತೀವ ನೋವು ತರಿಸಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಮಹಿಳೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತು ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.