ADVERTISEMENT

ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿ: ಕುಟ್ಟಂಡ ತಂಡಕ್ಕೆ ಭರ್ಜರಿ ಜಯ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 4:43 IST
Last Updated 25 ಏಪ್ರಿಲ್ 2024, 4:43 IST
ಗೋಣಿಕೊಪ್ಪಲು ಬಳಿಯ ಬಾಳೆಲೆಯಲ್ಲಿ ನಡೆಯುತ್ತಿರುವ ಅರಮಣಮಾಡ ಕ್ರಿಕೆಟ್ ಟೂರ್ನಿಯ ಮಹಿಳಾ ವಿಭಾಗದಲ್ಲಿ ಅಜ್ಜಿಕುಟ್ಟೀರ ತಂಡದ ಆಟಗಾರ್ತಿಯೊಬ್ಬರು ಉತ್ತಮ ಬ್ಯಾಟಿಂಗ್ ನಡೆಸಿದರು
ಗೋಣಿಕೊಪ್ಪಲು ಬಳಿಯ ಬಾಳೆಲೆಯಲ್ಲಿ ನಡೆಯುತ್ತಿರುವ ಅರಮಣಮಾಡ ಕ್ರಿಕೆಟ್ ಟೂರ್ನಿಯ ಮಹಿಳಾ ವಿಭಾಗದಲ್ಲಿ ಅಜ್ಜಿಕುಟ್ಟೀರ ತಂಡದ ಆಟಗಾರ್ತಿಯೊಬ್ಬರು ಉತ್ತಮ ಬ್ಯಾಟಿಂಗ್ ನಡೆಸಿದರು   

ಗೋಣಿಕೊಪ್ಪಲು: ಸಮೀಪದ ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಅಮ್ಮತ್ತಿಕಾರ್ಮಾಡುವಿನ ಕುಟ್ಟಂಡ ತಂಡ ನಾಪೋಕ್ಲು ಕಳ್ಳೇಂಗಡ ತಂಡದ ವಿರುದ್ಧ 108 ರನ್ ಗಳ ಭರ್ಜರಿ ಜಯ ಸಾಧಿಸಿತು.

ನಿಗದಿತ 5 ಓವರ್‌ಗಳಲ್ಲಿ ಕುಟ್ಟಂಟ ತಂಡ ಯಾವುದೇ ವಿಕೇಟ್ ನಷ್ಟವಿಲ್ಲದೆ 147 ರನ್ ಗಳಿಸಿತ್ತು. ಗೆಲುವಿನ ಗುರಿ ಬೆನ್ನು ಹತ್ತಿದ ಕಳ್ಳೇಂಗಡ ತಂಡ ನಿಗದಿತ 5 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 39 ರನ್ ಗಳಿಸಲಷ್ಟೇ ಶಕ್ತವಾಯಿತು.

ಪಾಸುರ ತಂಡ ಕಂಜಿತಂಡ ತಂಡದ ವಿರುದ್ಧ 7 ವಿಕೆಟ್‌ಗಳಿಂದ ಜಯ ಗಳಿಸಿತು. ಮೊದಲು ಬ್ಯಾಟ್ ಮಾಡಿದ ಕಂಜಿತಂಡ ನಿಗದಿತ 8 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತ್ತು. ಗೆಲುವಿನ ಗುರಿ ಬೆನ್ನು ಹತ್ತಿದ ಪಾಸುರ ತಂಡ ಅಷ್ಟೇ ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 113 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ADVERTISEMENT

ಅಡ್ಡೇಂಗಡ ತಂಡ ಬೇಗೂರು ಕಳ್ಳೇಂಗಡ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿತು. ಕಳ್ಳೇಂಗಡ ತಂಡ 5 ವಿಕೆಟ್ ಕಳೆದುಕೊಂಡು ಕೇವಲ 47 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಅಡ್ಡೇಂಗಡ ತಂಡ ಕೇವಲ 4.1 ಓವರ್ ಗಳಲ್ಲಿಯೇ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಮುದ್ದಿಯಡ ತಂಡ ಕೊಟ್ಟುಕತ್ತೀರ ತಂಡದ ವಿರುದ್ಧ 48 ರನ್ ಗಳಿಂದ ಗೆಲುವು ದಾಖಲಿಸಿತು. ಮುದ್ದಿಯಡ 2 ವಿಕೆಟ್‌ಗೆ 92 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಕೊಟ್ಟುಕತ್ತೀರ 7 ವಿಕೆಟ್ ಕಳೆದುಕೊಂಡು ಕೇವಲ 44 ರನ್ ಗಳಿಸಿ ಸೋಲಪ್ಪಿಕೊಂಡಿತು.

ಮಾಣೀರ ತಂಡ ಕಾಯಪಂಡ ವಿರುದ್ಧ 7 ವಿಕೆಟ್‌ಗಳಿಂದ ಜಯ ಗಳಿಸಿತು. ಕಾಯಪಂಡ ತಂಡ ನೀಡಿದ 91 ರನ್‌ಗಳ ಗುರಿಯನ್ನು ಬೆನ್ನತ್ತಿದ ಮಾಣೀರ ತಂಡ 3 ವಿಕೆಟ್ ಕಳೆದುಕೊಂಡು ಗುರಿ ತಲಪಿತು.

ಐಚಂಡ ತಂಡವು ಮರುವಂಡ ವಿರುದ್ಧ 9 ರನ್‌ಗಳಿಂದ ರೋಚಕ ಗೆಲುವು ಪಡೆಯಿತು. ಐಚಂಡ 4 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿದರೆ ಮರುವಂಡ 3 ವಿಕೆಟ್ ಕಳೆದುಕೊಂಡು 83 ರನ್ ಗಳಿಸಿ ಗೆಲುವಿನ ಹೊಸ್ತಿಲಲ್ಲಿ ಎಡವಿತು.

ಚಿಯಕಪೂವಂಡ ತಂಡವು ಮೇವಡ ತಂಡದ ಎದುರು 9 ವಿಕೆಟ್‌ಗಳಿಂದ ಗೆಲುವು ದಾಖಲಿಸಿತು. ಅಳಮೇಂಗಡ ತಂಡ 9 ವಿಕೆಟ್‌ಗಳಿಂದ ಬಲ್ಲಿಮಾಡ ತಂಡವನ್ನು ಮಣಿಸಿತು. ಮಣವಟ್ಟೀರ ಕುಂಙಂಗಡ ತಂಡದ ವಿರುದ್ಧ 9 ವಿಕೆಟ್‌ಗಳ ಗೆಲುವು ಪಡೆಯಿತು. ಚೊಟ್ಟೆಂಗಡ ಹಾಗೂ ಮುದ್ದೀರ ತಂಡ ವಾಕ್ ಓವರ್ ಪಡೆದವು.

ಮಹಿಳಾ ವಿಭಾಗ: ಮಹಿಳಾ ವಿಭಾಗದಲ್ಲಿ ಅಜ್ಜಿಕಟ್ಟೀರ ತಂಡ ಮುದ್ದಿಯಡ ತಂಡದ ಎದುರು 16 ರನ್‌ಗಳ ಅಂತರದಿಂದ ಗೆಲುವು ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಅಜ್ಜಿಕುಟ್ಟೀರ ತಂಡ ನಿಗದಿತ 5 ಓವರ್‌ಗಳಲ್ಲಿ 1 ವಿಕೆಟ್‌ಗೆ 42 ರನ್ ಗಳಿಸಿತು. ಗೆಲುವಿನ ಗುರಿ ಬೆನ್ನು ಹತ್ತಿದ ಮರುವಂಡ ಕೇವಲ 26 ರನ್ ಗಳಿಸಲಷ್ಟೇ ಶಕ್ತವಾಯಿತು.

ಅಚ್ಚಕಾಳೇರ ತಂಡ ಕಾಯಪಂಡ ತಂಡದ ವಿರುದ್ಧ 7 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಮೇವಡ ತಂಡ ತೆಕ್ಕಡ ವಿರುದ್ಧ 17 ರನ್‌ಗಳಿಂದ ಗೆಲುವು ಪಡೆಯಿತು.

ಗೋಣಿಕೊಪ್ಪಲು ಬಳಿಯ ಬಾಳೆಲೆಯಲ್ಲಿ ನಡೆಯುತ್ತಿರುವ ಅರಮಣಮಾಡ ಕ್ರಿಕೆಟ್ ಟೂರ್ನಿಯ ಮಹಿಳಾ ವಿಭಾಗದಲ್ಲಿ ಅಜ್ಜಿಕುಟ್ಟೀರ ತಂಡದ ಆಟಗಾರ್ತಿ ಉತ್ತಮ ಬ್ಯಾಟಿಂಗ್ ನಡೆಸಿದರು

ದಿನದಿಂದ ದಿನಕ್ಕೆ ಕಳೆಗಟ್ಟುತ್ತಿರುವ ಕ್ರಿಕೆಟ್ ಟೂರ್ನಿ ಹಲವು ತಂಡಗಳಿಂದ ಉತ್ತಮ ಪ್ರದರ್ಶನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.