ADVERTISEMENT

ಆಚಾರ–ವಿಚಾರ, ಸಂಸ್ಕೃತಿ ಉಳಿಸಿ: ಪೆರಿಯನ ಉದಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 4:55 IST
Last Updated 27 ಅಕ್ಟೋಬರ್ 2025, 4:55 IST
ಸುಂಟಿಕೊಪ್ಪ ಸಮೀಪದ ಗುಡ್ಡೆ ಹೊಸೂರು ಗೌಡ ಸಮಾಜದ ನಿವೇಶನದಲ್ಲಿ ನಡೆದ 11ನೇ ವರ್ಷದ ಅರೆಭಾಷೆ ಗೌಡ ಸಂಘದ ವಾರ್ಷಿಕ ಮಹಾಸಭೆಯನ್ನು ಅರೆಭಾಷೆ ಗೌಡ ಫೆಡರೇಷನ್ ಕಾರ್ಯದರ್ಶಿ ಪೆರಿಯನ ಉದಯ ಹಾಗೂ ಗಣ್ಯರು ಉದ್ಘಾಟಿಸಿದರು
ಸುಂಟಿಕೊಪ್ಪ ಸಮೀಪದ ಗುಡ್ಡೆ ಹೊಸೂರು ಗೌಡ ಸಮಾಜದ ನಿವೇಶನದಲ್ಲಿ ನಡೆದ 11ನೇ ವರ್ಷದ ಅರೆಭಾಷೆ ಗೌಡ ಸಂಘದ ವಾರ್ಷಿಕ ಮಹಾಸಭೆಯನ್ನು ಅರೆಭಾಷೆ ಗೌಡ ಫೆಡರೇಷನ್ ಕಾರ್ಯದರ್ಶಿ ಪೆರಿಯನ ಉದಯ ಹಾಗೂ ಗಣ್ಯರು ಉದ್ಘಾಟಿಸಿದರು   

Join hands to save customs, traditions and culture

ಸುಂಟಿಕೊಪ್ಪ: ಕೊಡಗಿನ ಮೂಲೆ ಮೂಲೆಗಳಲ್ಲಿ ಅರೆ ಭಾಷೆ ಗೌಡ ಸಮಾಜದ ನಿವೇಶನವಿದ್ದು, ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಅರೆಭಾಷೆ ಗೌಡ ಫೆಡರೇಷನ್ ಕಾರ್ಯದರ್ಶಿ ಪೆರಿಯನ ಉದಯ ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

ಸಮೀಪದ ಗುಡ್ಡೆ ಹೊಸೂರು ಪಾಮರ ರೆಸಾರ್ಟ್ ಬಳಿಯ ಗೌಡ ಸಮಾಜದ ನಿವೇಶನದಲ್ಲಿ ನಡೆದ 11ನೇ ವರ್ಷದ ಅರೆಭಾಷೆ ಗೌಡ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಸಮಾಜದ ಪ್ರಮುಖರು, ದಾನಿಗಳಿಂದ ದೇಣಿಗೆ ಪಡೆದು ಸಮಾಜದ ಸಮುದಾಯದ ಭವನವನ್ನು ನಿರ್ಮಿಸಬೇಕು, ಆ ಮೂಲಕ ಎಲ್ಲಾ ವರ್ಗದ ಜನಾಂಗದವರ ಶುಭ ಸಮಾರಂಭಗಳು ಮತ್ತು ಇತರ ಕಾರ್ಯಕ್ರಮಗಳಿಗೆ ನೀಡಬೇಕು. ಇದರಿಂದ ಸಮಾಜದಲ್ಲಿ ಅರೆ ಭಾಷೆ ಗೌಡ ಸಮಾಜಕ್ಕೆ ಉತ್ತಮ ಸಮಾಜ ಎಂಬ ಹೆಗ್ಗಳಿಕೆ ಸಿಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕರಾಗಿ ಮಾತನಾಡಿದ ಹಿರಿಯ ಕಲಾವಿದರು ಹಾಗೂ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಸಮಾಜ ಗೌರವಾಧ್ಯಕ್ಷರಾದ ದೇವಜನ ಗೀತಾ ಮೊಂಟಡ್ಕ ಅವರು, ಮನೆಗಳಲ್ಲಿ ಮಕ್ಕಳೊಂದಿಗೆ ಅರೆಭಾಷೆ ಕಲಿಸಿ ಕೊಡುವುದರ ಮೂಲಕ ಸಮಾಜದ ಆಚಾರ ವಿಚಾರ, ಸಂಸ್ಕೃತಿ ಉಳಿವಿಗೆ ಉತ್ತೇಜನ ನೀಡಬೇಕೆಂದು ಕಿವಿಮಾತು ಹೇಳಿದರು‌.
ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ವಿ.ಪಿ .ಶಶಿಧರ್ ಮಾತನಾಡಿ, ಸಮುದಾಯದ ಉಳಿವಿಗೆ ಎಲ್ಲ ಗೌಡ ಜನಾಂಗದವರು ಕೈ ಜೋಡಿಸಿ ಎಂದು ಮನವಿ ಮಾಡಿದರು.

ಸಂಘದ ಅಧ್ಯಕ್ಷರಾದ ಗುಡ್ಡೆಮನೆ ವಿಶ್ವ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಬೊಮ್ಮೇಗೌಡನ ಭುವನೇಶ್ವರಿ, ಕಾರ್ಯದರ್ಶಿ ಅಚ್ಚಂಡಿರ ತಾರ ಹೇಮರಾಜ್, ಸಹಕಾರ್ಯದರ್ಶಿ ಬೊಮ್ಮುಡಿರ ಬಾಲಕೃಷ್ಣ, ಖಜಾಂಚಿ ರೂಪ ನಿತ್ಯಾನಂದ, ನಿರ್ದೇಶಕರಾದ ಕುಡೆಕಲ್ ಗಣೇಶ್, ಚಂಡಿರ ಮಂಜುನಾಥ್, ಕಣ್ಣಯ್ಯನ ಬಾಲಕೃಷ್ಣ , ಮಂದೋಡಿ ಜಗನ್ನಾಥ್, ಗುಡ್ಡೆಮನೆ ಜಯ ವಿಶ್ವ ಕುಮಾರ್, ಕಳಂಜನ ದಾದಪ್ಪ, ನಡುಮನೆ ಪವನ್, ಸಲಹಾ ಸಮಿತಿ ಸದಸ್ಯರುಗಳಾದ ಅಚ್ಚಂಡಿರ ಹೇಮರಾಜು, ಬೆದ್ರಾಂಗಲ ಭಾರತೀಶ್, ಮಂದೋಡಿ ಹೇಮಚಂದ್ರ, ಚೆರಿಯಮನೆ ಭರತ, ಬೊಟ್ಟು ಮನೆ ಸತ್ಯ ಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.