ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗೆ ನೂತನ ಸದಸ್ಯರಾಗಿ ನೇಮಕಗೊಂಡಿರುವ ಪಿ.ಎಂ.ಸಂದೀಪ್ ಮತ್ತು ಲೋಕೇಶ್ ಊರುಬೈಲು ಅವರನ್ನು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅವರು ಶುಕ್ರವಾರ ಇಲ್ಲಿನ ಅಕಾಡೆಮಿ ಕಚೇರಿಯಲ್ಲಿ ಭೇಟಿಯಾಗಿ ಚರ್ಚಿಸಿದರು.
ನೂತನ ಸದಸ್ಯರಾಗಿ ನೇಮಕವಾಗಿರುವ ಪಿ.ಎಂ.ಸಂದೀಪ್ ಅವರು ಮರಗೋಡು ಗ್ರಾಮದವರು ಹಾಗೂ ಲೋಕೇಶ್ ಊರುಬೈಲು ಅವರು ಚೆಂಬು ಗ್ರಾಮದವರಾಗಿದ್ದಾರೆ.
ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಅಕಾಡೆಮಿ ಮಾಜಿ ಅಧ್ಯಕ್ಷರಾದ ದಿ.ದೇವಿಪ್ರಸಾದ್ ಅವರ ಪತ್ನಿ ಇಂದಿರಾ, ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್, ಲಕ್ಷ್ಮಿನಾರಾಯಣ ಕಜೆಗದ್ದೆ, ಜಯರಾಮ್ ಅವರನ್ನು ಈಚೆಗೆ ಭೇಟಿಯಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಾರ್ಯಚಟುವಟಿಕೆಗೆ ಅಗತ್ಯ ಸಹಕಾರಕ್ಕೆ ಕೋರಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.