ಸೋಮವಾರಪೇಟೆ: ಆಷಾಢ ಮಾಸದ ಕೊನೆಯ ಶುಕ್ರವಾರದ ಪ್ರಯುಕ್ತ ಇಲ್ಲಿನ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ವಾಹನ ನಿಲ್ದಾಣದಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಂಚಾಲಕ ರೋಹಿತ್ ಪೂಜಾರಿ ಮಾತನಾಡಿ, ವಾಹನ ಚಾಲಕರಿಗೆ ಚಾಂಮುಡೇಶ್ವರಿ ದೇವಿ ಪ್ರಮುಖ ದೇವರು. ವಾಹನ ಚಾಲಕರಿಗೆ ಯಾವುದೇ ಅಪಾಯ ಇಲ್ಲದೆ, ರಕ್ಷಣೆ ನೀಡಬೇಕೆಂಬ ಉದ್ದೇಶದಿಂದ ಆಷಾಢ ಮಾಸದ ಕಡೆಯ ಶುಕ್ರವಾರ ಕಳೆದ ಮೂರು ವರ್ಷಗಳಿಂದಲೂ ಪೂಜಾ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಬೆಳಿಗ್ಗೆ ಪೂಜೆ ನಂತರ, ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನದಾನ ನಡೆಸಲಾಗುತ್ತಿದೆ ಎಂದರು.
ಪೂಜಾ ಕಾರ್ಯವನ್ನು ಅರ್ಚಕ ನಿತಿನ್ ನಡೆಸಿದರು. ಈ ಸಂದರ್ಭ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಪ್ರಮುಖರಾದ ಕೆ.ಎನ್. ದೀಪಕ್, ವಸಂತ, ಸಿ.ಸಿ. ನಂದ, ದಾಮೋದರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.