ADVERTISEMENT

ಪ್ರತಿ ವರ್ಷವೂ ನಿರ್ದೇಶಕ ಎ.ಟಿ.ರಘು ಅವರ ಸ್ಮರಣೆ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 4:00 IST
Last Updated 14 ಏಪ್ರಿಲ್ 2025, 4:00 IST
ಕೊಡಗು ಕಲಾವಿದರ ಸಂಘದ ವತಿಯಿಂದ ವಿರಾಜಪೇಟೆಯಲ್ಲಿನ ಕೆ.ಕೆ.ಗ್ರೂಪ್ ಸಭಾಂಗಣದಲ್ಲಿ ಭಾನುವಾರ ನಿರ್ದೇಶಕ ಎ.ಟಿ.ರಘು ಅವರ ಶ್ರದ್ದಾಂಜಲಿ ಸಭೆಯಲ್ಲಿ ನಡೆಯಿತು.
ಕೊಡಗು ಕಲಾವಿದರ ಸಂಘದ ವತಿಯಿಂದ ವಿರಾಜಪೇಟೆಯಲ್ಲಿನ ಕೆ.ಕೆ.ಗ್ರೂಪ್ ಸಭಾಂಗಣದಲ್ಲಿ ಭಾನುವಾರ ನಿರ್ದೇಶಕ ಎ.ಟಿ.ರಘು ಅವರ ಶ್ರದ್ದಾಂಜಲಿ ಸಭೆಯಲ್ಲಿ ನಡೆಯಿತು.   

ವಿರಾಜಪೇಟೆ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರತಿ ವರ್ಷವೂ ನಿರ್ದೇಶಕ ಎ.ಟಿ.ರಘು ಅವರನ್ನು ಸ್ಮರಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ತಿಳಿಸಿದರು.

ಕೊಡಗು ಕಲಾವಿದರ ಸಂಘದ ವತಿಯಿಂದ ಇಲ್ಲಿನ ಕೆ.ಕೆ.ಗ್ರೂಪ್ ಸಭಾಂಗಣದಲ್ಲಿ ಭಾನುವಾರ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ರಘು ಸಾಕಷ್ಟು ಕನ್ನಡ ಮತ್ತು ಕೆಲವು ಕೊಡವ ಧಾರಾವಾಹಿಗಳನ್ನು ನಿರ್ಮಿಸಿದ ಮಹಾನ್ ಕಲಾವಿದ. ಕೊಡಗಿನಲ್ಲಿ ಅಳಿವಿನಲ್ಲಿದ್ದ ಐನ್ ಮನೆಗಳನ್ನು ಪವಿತ್ರ ದೇವಾಲಯವೆಂದು ಅದರ ಮಹತ್ವವನ್ನು ಅರುವಿದವರು ಎ.ಟಿ.ರಘು. ಅದೇ ರೀತಿ ಕೊಡವರ ಗೆಜ್ಜೆ ತಂಡಿನ ಮಹತ್ವವನ್ನು ಬಿಂಬಿಸಿ ಪುರ್ನಜೀವನ ನೀಡಿದರು. ಇದರಿಂದ ಅನೇಕ ಐನ್‌ಮನೆಗಳು ಮತ್ತೆ ತಲೆ ಎತ್ತಿ ನಿಂತಿದ್ದು ಸರ್ಕಾರ ಸಹ ಅದಕ್ಕೆ ಅನುದಾನ ನೀಡುತ್ತಿದೆ ಎಂದು ಹೇಳಿದರು.

ADVERTISEMENT

ಬರಹಗಾರ ಉಳ್ಳಿಯಡ ಪೂವಯ್ಯ ಮಾತನಾಡಿ,‘ರಘು ಅವರನ್ನು ಹತ್ತಿರದಿಂದ ಕಂಡವನು ನಾನು. ಕೊನೆಯ ದಿನದಲ್ಲಿ ಅವರು ಸಂಕಷ್ಟದ ದಿನಗಳನ್ನು ಕಂಡರು. ಅವರ ಸಾಧನೆಗಳನ್ನು ನಾವು ಸುವರ್ಣ ಅಕ್ಷರದಲ್ಲಿ ಬರೆದಿಡಬೇಕು. ಕೊಡಗಿನಲ್ಲಿ ನಾಡ ಮಣ್ಣೆ ನಾಡ ಕೂಳ್ ಎನ್ನುವ ಕೊಡವ ಚಿತ್ರದ ಮೂಲಕ ಸಿನಿ ಪಯಣ ಆರಂಭವಾಯಿತು ಎಂದು ಅವರು ಅವರ ಜೀವನ ಸಾಧನೆಗಳ ಕುರಿತು ಮಾತನಾಡಿದರು.

ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕ ಅಧ್ಯಕ್ಷ ಅನಂತಶಯನ ಮಾತನಾಡಿ, ‘ಯಾವುದೇ ಋತುಗಳು ಕಾಲದಲ್ಲಿ ಬಂದು ಹೋದರು ಮಾನವನಿಗೆ ಇಹಲೋಕ ತ್ಯಜಿಸುವುದು ಅನಿವಾರ‍್ಯ. ಆದರೆ, ಅತನಲ್ಲಿಯ ಅತ್ಮಜ್ಯೋತಿ ಬೆಳಗಿದರೆ ಅತ ಎಲ್ಲರಲ್ಲೂ ಉಳಿದು ಹೋಗುತ್ತಾನೆ. ರಘು ಅವರು ಬೆಳಗಿದ ಜ್ಯೋತಿಯಿಂದ ಕೊಡಗಿನಲ್ಲಿ ಅನೇಕ ಸ್ಥಳಿಯ ಕಲಾವಿದರರಿದ್ದು ಅವರಿಗೆ ರಘು ಮಾದರಿಯಾಗಿದ್ದಾರೆ. ಅಲ್ಲದೆ ಎಲ್ಲರಿಗೂ ಒಂದು ಉತ್ತಮ ಸಾಧನೆ ಮಾಡಲು ಅವರು ಪ್ರೇರಣೆಯಾಗಿದ್ದಾರೆ’ ಎಂದರು.

ಇದೇ ಸಂದರ್ಭ ಎ.ಟಿ.ರಘು ಅವರ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.

ಹಿರಿಯ ಕಲಾವಿದರಾದ ವಾಂಚೀರ ವಿಠಲ್ ನಾಣಯ್ಯ,  ನೆರವಂಡ ಉಮೇಶ್, ಸಾಹಿತಿಗಳಾದ ಇಟ್ಟಿರ ಬಿದ್ದಪ್ಪ ಪೊನ್ನಚ್ಚೆಟಿರ ರಮೇಶ್ ನಡು ಬಾಡೆ ಕೊಡವ ಸಂಘಟನೆಯ ಚಾಮೇರ ದಿನೇಶ್, ಕೊಡಗು ಕಲಾವಿದರ ಸಂಘದ ಅಧ್ಯಕ್ಷ ಕೊಟ್ಟುಕತ್ತೀರ ಪ್ರಕಾಶ್, ಉದ್ಯಮಿ ಕೊಟ್ರಮಾಡ ಲಾಲ ಪೂಣಚ್ಚ ಮತ್ತು ಶಾಂತ ಪೂವಯ್ಯ ಎ.ಟಿ.ರಘು ಅವರ ಪುತ್ರಿ ಬಯವಂಡ ಬಿನು ಸಚೀನ್, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಾದಂಡ ಪೂವಯ್ಯ, ಕಲಾವಿದರಾದ  ಅಲ್ಲಾರಂಡ ವಿಠಲ್ ನಂಜಪ್ಪ, ಬಿದ್ದಂಡ ಉತ್ತಮ್ ಪೊನ್ನಪ್ಪ, ನೆಲ್ಲಚಂಡ ರೇಖಾ ಭಾಗವಹಿಸಿದ್ದರು.

ಉಳುವಂಗಡ ಕಾವೇರಿ ಉದಯ ಕವನ ವಾಚಿಸಿದರು. ಜಾದುಗಾರ ವಿಕ್ರಂ ಶೆಟ್ಟಿ ಜಾದು ಪ್ರದರ್ಶಿಸಿದರು. ಟಿ.ಡಿ.ಮೋಹನ್ ಮತ್ತು ಮಾಳೇಟಿರ ಅಜಿತ್ ಅವರು ಹಾಡಿದರು. ಬಿ.ಆರ್.ಸತೀಶ್ ಅವರು ರಘು ಅವರ ಭಾವಚಿತ್ರ ರಚಿಸಿ ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.