ADVERTISEMENT

ಮಡಿಕೇರಿ | ಅಪರೂಪದ ‘ಅವತರಣಮ್ ಭ್ರಾಂತಾಲಯಮ್’!

2 ದಿನಗಳ ಮಡಿಕೇರಿಯಲ್ಲಿ ನಡೆದ ‘ನೀನಾಸಂ ತಿರುಗಾಟ’

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 5:32 IST
Last Updated 11 ಜನವರಿ 2026, 5:32 IST
ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ‘ನೀನಾಸಂ ತಿರುಗಾಟ’ದ ನಾಟಕ ಪ್ರದರ್ಶನದಲ್ಲಿ ಶನಿವಾರ ಜಿ.ಶಂಕರ ಪಿಳ್ಳೆ ರಚನೆಯ ದಾಮೋದರ ಶೆಟ್ಟಿ ಕನ್ನಡಕ್ಕೆ ಅನುವಾದಿಸಿರುವ ಶಂಕರ ವೆಂಕಟೇಶ್ವರನ್ ನಿರ್ದೇಶನದ ‘ಅವತರಣಮ್ ಭ್ರಾಂತಾಲಯಮ್’ ನಾಟಕ ಪ್ರದರ್ಶನಗೊಂಡಿತು     ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ನೀನಾಸಂ ತಿರುಗಾಟದ ನಾಟಕ
ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ‘ನೀನಾಸಂ ತಿರುಗಾಟ’ದ ನಾಟಕ ಪ್ರದರ್ಶನದಲ್ಲಿ ಶನಿವಾರ ಜಿ.ಶಂಕರ ಪಿಳ್ಳೆ ರಚನೆಯ ದಾಮೋದರ ಶೆಟ್ಟಿ ಕನ್ನಡಕ್ಕೆ ಅನುವಾದಿಸಿರುವ ಶಂಕರ ವೆಂಕಟೇಶ್ವರನ್ ನಿರ್ದೇಶನದ ‘ಅವತರಣಮ್ ಭ್ರಾಂತಾಲಯಮ್’ ನಾಟಕ ಪ್ರದರ್ಶನಗೊಂಡಿತು     ಪ್ರಜಾವಾಣಿ ಚಿತ್ರ/ರಂಗಸ್ವಾಮಿ ನೀನಾಸಂ ತಿರುಗಾಟದ ನಾಟಕ   

ಮಡಿಕೇರಿ: ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆಯುತ್ತಿದ್ದ ‘ನೀನಾಸಂ ತಿರುಗಾಟ’ ನಾಟಕ ಪ್ರದರ್ಶನಕ್ಕೆ ಶನಿವಾರ ತೆರೆಬಿತ್ತು.

ಶನಿವಾರ ಜಿ.ಶಂಕರ ಪಿಳ್ಳೆ ರಚನೆಯ ದಾಮೋದರ ಶೆಟ್ಟಿ ಕನ್ನಡಕ್ಕೆ ಅನುವಾದಿಸಿರುವ ಶಂಕರ ವೆಂಕಟೇಶ್ವರನ್ ನಿರ್ದೇಶನದ ‘ಅವತರಣಮ್ ಭ್ರಾಂತಾಲಯಮ್’ ನಾಟಕ ಪ್ರದರ್ಶನ ಪ್ರೇಕ್ಷಕರನ್ನು ಸೆಳೆಯಿತು. ವಿಭಿನ್ನ ಕಥಾಹಂದರವನ್ನು ಹೊಂದಿದ್ದ ಈ ನಾಟಕದ ಕಥಾವಸ್ತು ಹಾಗೂ ಕಲಾವಿದರ ಅಭಿನಯ ಮನೋಜ್ಞವಾಗಿ ಮೂಡಿ ಬಂತು.

ಜಗತ್ತಿನ ಅತಿ ದೊಡ್ಡದಾದ ಶಬ್ದವನ್ನು ಕೇಳಬೇಕೇಂದುಕೊಂಡ ಒಬ್ಬ ರಾಜನ ಕಥೆಯನ್ನು ಹೇಳಬೇಕೆಂದುಕೊಂಡು ಹೊರಟ ಈ ನಾಟಕದೊಳಗೆ ಶಬ್ದಗಳು ತಮ್ಮ ಅರ್ಥವನ್ನು ಕಳೆದುಕೊಳ್ಳುವಂತಹ ಸ್ಥಿತಿ ಮೂಡುತ್ತದೆ. ಒಂದು ವಿಭಿನ್ನವಾದ ಪ್ರಯೋಗ ಈ ನಾಟಕದಲ್ಲಿ ಕಂಡು ಬಂತು. ತಾವು ನೋಡಿ ತಕ್ಷಣಕ್ಕೆ ಅನ್ನಿಸಿದ್ದಕ್ಕಿಂತ ಹೆಚ್ಚಿನ ಅರ್ಥವನ್ನು ಈ ನಾಟಕ ಅಭಿವ್ಯಕ್ತಿಸಿದ್ದು ವಿಶೇಷ ಎನಿಸಿತು.

ADVERTISEMENT

ಪ್ರದರ್ಶನದ ಮೊದಲ ದಿನವಾದ ಶುಕ್ರವಾರ ಬಾನು ಮುಷ್ತಾಕ್ ಅವರ ಕಥೆಯನ್ನು ಆಧರಿಸಿದ ರಂಗಪ್ರಸ್ತುತಿ ‘ಹೃದಯದ ತೀರ್ಪು’ ಪ್ರದರ್ಶನಗೊಂಡಿತ್ತು.

ಈ ಎರಡೂ ನಾಟಕಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದು ವೀಕ್ಷಿಸಿದರು. ಎರಡೂ ನಾಟಕಗಳಿಗೂ ಉಚಿತ ಪ್ರದರ್ಶನ ಇತ್ತು. ಇಡೀ ಯೋಜನೆಗೆ ಗಣೇಶ್ ಎಂ ಭೀಮನಕೋಣೆ ಅವರ ನಿರ್ವಹಣೆ ಇತ್ತು.

ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ‘ನೀನಾಸಂ ತಿರುಗಾಟ’ದ ನಾಟಕ ಪ್ರದರ್ಶನದಲ್ಲಿ ಶನಿವಾರ ಜಿ.ಶಂಕರ ಪಿಳ್ಳೆ ರಚನೆಯ ದಾಮೋದರ ಶೆಟ್ಟಿ ಕನ್ನಡಕ್ಕೆ ಅನುವಾದಿಸಿರುವ ಶಂಕರ ವೆಂಕಟೇಶ್ವರನ್ ನಿರ್ದೇಶನದ ‘ಅವತರಣಮ್ ಭ್ರಾಂತಾಲಯಮ್’ ನಾಟಕ ಪ್ರದರ್ಶನಗೊಂಡಿತು  ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ನಾಟಕವನ್ನು ವೀಕ್ಷಿಸಿದರು  ಪ್ರಜಾವಾಣಿ ಚಿತ್ರ/ರಂಗಸ್ವಾಮಿ

ವಿಭಿನ್ನ ಕಥಾಹಂದರ ಹೊಂದಿದ್ದ ನಾಟಕ ಎರಡೂ ನಾಟಕಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರು ಎರಡೂ ನಾಟಕಗಳಿಗೂ ಇತ್ತು ಉಚಿತ ಪ್ರವೇಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.