ADVERTISEMENT

ಬಲಮುರಿ: ನೀರಿನ ಹರಿವು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 14:27 IST
Last Updated 15 ಜೂನ್ 2025, 14:27 IST
ಮಳೆಯಿಂದಾಗಿ ನಾಪೋಕ್ಲು ಸಮೀಪದ ಬಲಮುರಿಯಲ್ಲಿ ಭಾನುವಾರ ನೀರು ಹರಿಯುತ್ತಿರುವುದು
ಮಳೆಯಿಂದಾಗಿ ನಾಪೋಕ್ಲು ಸಮೀಪದ ಬಲಮುರಿಯಲ್ಲಿ ಭಾನುವಾರ ನೀರು ಹರಿಯುತ್ತಿರುವುದು   

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ಬೆಳಗಿನಿಂದಲೇ ಬಿರುಸಿನ ಮಳೆ ಸುರಿದಿದ್ದು, ಸಮೀಪದ ಬಲಮುರಿಯ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.

ಸಂಜೆಯ ವೇಳೆಗೆ ನೀರು ಕಿರು ಸೇತುವೆ ಮಟ್ಟದಲ್ಲಿ ನೀರು ಹರಿಯುತ್ತಿತ್ತು.

ಮಳೆ ಬಿರುಸುಗೊಳ್ಳುತ್ತಿದ್ದಂತೆ ತಳಮಟ್ಟದಲ್ಲಿರುವ ಕಿರು ಸೇತುವೆ ಮುಳುಗಡೆಯಾಗುವ ಸಾಮಾನ್ಯ. ಈ ಹಿಂದೆ ಸೇತುವೆ ಮುಳುಗಡೆಯಾಗಿದ್ದಾಗ ಗ್ರಾಮೀಣ ಪ್ರದೇಶದವರಿಗೆ ಸಂಚಾರ ಸಮಸ್ಯೆ ಉಂಟಾಗಿತ್ತು.

ADVERTISEMENT

ಎತ್ತರದ ಸೇತುವೆ ನಿರ್ಮಾಣಗೊಂಡ ಬಳಿಕ ಈ ಸಮಸ್ಯೆ ತಪ್ಪಿದೆ. ಬಲಮುರಿ ಮೂಲಕ ಪಾರಾಣೆ, ನಾಪೋಕ್ಲು ಭಾಗಕ್ಕೆ ತೆರಳುವವರಿಗೆ ಈಗ ಯಾವುದೇ ಸಮಸ್ಯೆ ಆಗುತ್ತಿಲ್ಲ.

ತಳಭಾಗದಲ್ಲಿ ಮತ್ತೊಂದು ಎತ್ತರದಲ್ಲಿ ಇರುವ ಸೇತುವೆಗಳು, ಮೈದುಂಬಿ ಹರಿಯುವಾಗ ಕಾಣುವ ರಮಣೀಯ ದೃಶ್ಯ ಮನಸೂರೆಗೊಳ್ಳುತ್ತದೆ. ಸೇತುವೆಯ ಮೇಲೆ ನಿಂತು ಹೊಳೆ ತುಂಬಿ ಹರಿಯುವುದನ್ನು ನೋಡುವುದು ಆಹ್ಲಾದಕರ. ಮಳೆ ಬಿಡುವು ಕೊಟ್ಟ ಅವಧಿಯಲ್ಲಿ ಹಲವರು ಭೇಟಿ ನೀಡಿ ಈ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳುತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.