ADVERTISEMENT

ಲೋಕಾರ್ಪಣೆಗೊಂಡ ಅಮ್ಮಾಟಂಡ ವಿಂದ್ಯಾ ದೇವಯ್ಯ ಅವರ ಚೊಚ್ಚಲ ಪುಸ್ತಕ

ತೆರೆಕಂಡ ಪೋಣಿಸಿದ ಮುತ್ತುಗಳು...

​ಪ್ರಜಾವಾಣಿ ವಾರ್ತೆ
Published 7 ಜೂನ್ 2024, 4:29 IST
Last Updated 7 ಜೂನ್ 2024, 4:29 IST
<div class="paragraphs"><p>ಕೊಡವ ಮಕ್ಕಡ ಕೂಟದ ವತಿಯಿಂದ ಗುರುವಾರ ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಬೈರೆಟ್ಟಿರ ಗಿರಿಜಾ ಅಯ್ಯಪ್ಪ ಅವರು ಅಮ್ಮಾಟಂಡ ವಿಂದ್ಯಾ ದೇವಯ್ಯ ಅವರ ‘ಕೊಯ್ತ ಮುತ್ತ್’ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿದರು.</p></div>

ಕೊಡವ ಮಕ್ಕಡ ಕೂಟದ ವತಿಯಿಂದ ಗುರುವಾರ ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಬೈರೆಟ್ಟಿರ ಗಿರಿಜಾ ಅಯ್ಯಪ್ಪ ಅವರು ಅಮ್ಮಾಟಂಡ ವಿಂದ್ಯಾ ದೇವಯ್ಯ ಅವರ ‘ಕೊಯ್ತ ಮುತ್ತ್’ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿದರು.

   

ಮಡಿಕೇರಿ: 4 ಸಾಲು, 5 ಸಾಲು, 8 ಸಾಲು ಮಾತ್ರವಲ್ಲ 18 ಸಾಲುಗಳ ಪದ್ಯಗಳಿರುವ ‘ಕೊಯ್ತ ಮುತ್ತ್’ ಕವನ ಸಂಕಲನ ಲೋಕಾರ್ಪಣೆಗೊಂಡಿತು.

ಅಮ್ಮಾಟಂಡ ವಿಂದ್ಯಾ ದೇವಯ್ಯ ಅವರ ಚೊಚ್ಚಲ ಈ ಪುಸ್ತಕದಲ್ಲಿ 156 ಕವನಗಳಿವೆ. 4 ಸಾಲಿನಿಂದ ಹಿಡಿದು 18 ಸಾಲುಗಳವರೆಗಿರುವ ಈ ಕವನಗಳು ದೈನಂದಿನ ಬದುಕಿನಲ್ಲಿ ಕಂಡು ಬರುವ ಸಂಗತಿಗಳನ್ನೇ ಒಳಗೊಂಡಿರುವುದು ವಿಶೇಷ.

ADVERTISEMENT

ಕೊಡವ ಮಕ್ಕಡ ಕೂಟದ ವತಿಯಿಂದ ಗುರುವಾರ ಇಲ್ಲಿನ ಪತ್ರಿಕಾ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಬೈರೆಟ್ಟಿರ ಗಿರಿಜಾ ಅಯ್ಯಪ್ಪ ಅವರು ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.

ಈ ವೇಳೆ ಮಾತನಾಡಿದ ಪುಸ್ತಕದ ಲೇಖಕಿ ಅಮ್ಮಾಟಂಡ ವಿಂದ್ಯಾ ದೇವಯ್ಯ, ‘ಈ ಪುಸ್ತಕ ಬರೆಯಲು ಪತಿ ದೇವಯ್ಯ ಅವರ ಪ್ರೋತ್ಸಾಹ ಕಾರಣ. ನಾನು ನಿತ್ಯದ ಬದುಕಿನಲ್ಲಿ ನಡೆಯುವ ಸಂಗತಿಗಳನ್ನೇ ಇಟ್ಟುಕೊಂಡು ಪದ್ಯಗಳನ್ನು ರಚಿಸಿದ್ದೇನೆ. ಈ ಪದ್ಯಗಳನ್ನು ನೋಡಿದ ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಅನಂತಶಯನ ಅವರು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರನ್ನು ಸಂಪರ್ಕಿಸಿ ಪುಸ್ತಕ ಪ್ರಕಾಶನಕ್ಕೆ ಪ್ರಯತ್ನಿಸಿದರು. ಬೊಳ್ಳಜಿರ ಬಿ.ಅಯ್ಯಪ್ಪ ಅವರು ತಮ್ಮ ಸಂಘಟನೆಯ ಸಹಕಾರದಿಂದ ಈ ಪುಸ್ತಕವನ್ನು ಹೊರ ತಂದರು’ ಎಂದು ಅವರು ಕೃತಜ್ಞತೆ ಅರ್ಪಿಸಿದರು.

ಹೆಣ್ಣುಮಕ್ಕಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿದಾಗ ಮಾತ್ರ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದನ್ನು ಓದಿದವರು ತಮ್ಮ ಜೀವನದಲ್ಲಿ ಸ್ವಲ್ಪವಾದರೂ ಬದಲಾವಣೆ ಕಾಣುವರು ಎಂಬ ನಿರೀಕ್ಷೆ ನನ್ನದು ಎಂದು ಹೇಳಿದರು.

ಆಗಸ್ಟ್ 17ರಂದು ಶತಕ!

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ‘ ಕೊಡವ ಸೇರಿದಂತೆ ವಿವಿಧ ಭಾಷೆಗಳ 92 ಪುಸ್ತಕಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ತೃಪ್ತಿ ಇದೆ. ಕೂಟದ ನೂರನೇ ಪುಸ್ತಕವನ್ನು ಆಗಸ್ಟ್ 17ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

ಸಮಾಜ ಸೇವಕರಾದ ಸಮಾಜ ಸೇವಕಿ ಅಮ್ಮಂಡ ಕಿಟ್ಟಿ ಬೆಳ್ಯಪ್ಪ, ಕೇಕಡ ಯಶೋಧ ಕಾವೇರಿಯಪ್ಪ ಹಾಗೂ ನೆರವಂಡ ಅನಿತಾ ಚರ್ಮಣ್ಣ ಹಾಜರಿದ್ದರು.

ಸಾಹಿತ್ಯಕ್ಕೆ ದಾನಿಗಳ ಕೊರತೆ; ಬೇಸರ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ‘ಇತ್ತೀಚಿನ ದಿನಗಳಲ್ಲಿ ದಾನಿಗಳು ಮುಂದೆ ಬಾರದೆ ಇರುವುದು ಬೇಸರ ತಂದಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ಸಾಹಿತ್ಯದ ಬೆಳವಣಿಗೆಗೆ ದಾನಿಗಳ ಸಹಕಾರದ ಅಗತ್ಯವಿದೆ. ಬರಹಗಾರರನ್ನು ಪ್ರೋತ್ಸಾಹಿಸಲು ದಾನಿಗಳು ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.