ADVERTISEMENT

ನಿರಂತರ ಮಳೆ: ಉಳುಮೆ ಶುರು

​ಪ್ರಜಾವಾಣಿ ವಾರ್ತೆ
Published 20 ಮೇ 2025, 11:25 IST
Last Updated 20 ಮೇ 2025, 11:25 IST
ನಾಪೋಕ್ಲುವಿನ ಕುಯ್ಯಂಗೇರಿ ಗ್ರಾಮದಲ್ಲಿ ಮಂಗಳವಾರ ರೈತ ಗದ್ದೆ ಉಳುಮೆಯಲ್ಲಿ ತೊಡಗಿರುವುದು
ನಾಪೋಕ್ಲುವಿನ ಕುಯ್ಯಂಗೇರಿ ಗ್ರಾಮದಲ್ಲಿ ಮಂಗಳವಾರ ರೈತ ಗದ್ದೆ ಉಳುಮೆಯಲ್ಲಿ ತೊಡಗಿರುವುದು    

ನಾಪೋಕ್ಲು: ಹೋಬಳಿಯಲ್ಲಿ ಮಂಗಳವಾರ ಬೆಳಿಗ್ಗೆ ಧಾರಾಕಾರ ಮಳೆ ಸುರಿಯಿತು. ಬಳಿಕ ಇಳಿಮುಖಗೊಂಡು ನಿರಂತರ ಹನಿ ಸುರಿಯುತ್ತಲೇ ಇತ್ತು.  ನಿತ್ಯ ಮಳೆಯಾಗುತ್ತಿರುವುದರಿಂದ ರೈತರು ಬಿರುಸಿನ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.

ನದಿ, ತೋಡುಗಳಲ್ಲಿ ನೀರಿನ ಪ್ರಮಾಣ ಏರಿಕೆ ಯಾಗಿದೆ. ಕಾಫಿ ತೋಟಗಳಲ್ಲಿ ತೇವಾಂಶವಿದ್ದು. ರೈತರು ರಾಸಾಯನಿಕ ಗೊಬ್ಬರಗಳನ್ನು ಗಿಡಗಳಿಗೆ ಹಾಕುತ್ತಿದ್ದಾರೆ.

ಅಲ್ಲಲ್ಲಿ ಭತ್ತ ಬಿತ್ತನೆ ಹಾಗೂ ನಾಟಿಗೆ ಗದ್ದೆಗಳನ್ನು ಹಸನುಗೊಳಿಸುವ ಸಿದ್ಧತೆ, ಉಳುಮೆ ಪ್ರಾರಂಭವಗಿದೆ.  ಕುಯ್ಯಂಗೇರಿ ಗ್ರಾಮದಲ್ಲಿ ರೈತರು ಗದ್ದೆ ಉಳುಮೆಗೆ ತೊಡಗಿದ್ದಾರೆ.

ADVERTISEMENT

‘ಮಳೆಯಿಂದ ಭೂಮಿ ಹದಗೊಂಡಿದೆ. ಉಳುಮೆಗೆ ಇದು ಸಕಾಲ. ಮುಂದಿನ ತಿಂಗಳು ಬಿತ್ತನೆ ಮಾಡಲು ಅನುಕೂಲವಾಗಲಿದೆ’ ಎಂದು ರೈತರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.