ADVERTISEMENT

ಗೋಣಿಕೊಪ್ಪಲು: ಕಾಫಿ ತೋಟದಲ್ಲಿ ಮೊಸಳೆ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 6:32 IST
Last Updated 9 ಅಕ್ಟೋಬರ್ 2022, 6:32 IST
ಗೋಣಿಕೊಪ್ಪಲು ಬಳಿಯ ಕಿರುಗೂರಿನ ಕಾಫಿ ತೋಟದಲ್ಲಿ ಕಂಡು ಬಂದ ಮೊಸಳೆಯನ್ನು ಹಿಡಿದು ಕಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ  ಲಕ್ಷ್ಮಣತೀರ್ಥ ನದಿಗೆ ಬಿಟ್ಟರು
ಗೋಣಿಕೊಪ್ಪಲು ಬಳಿಯ ಕಿರುಗೂರಿನ ಕಾಫಿ ತೋಟದಲ್ಲಿ ಕಂಡು ಬಂದ ಮೊಸಳೆಯನ್ನು ಹಿಡಿದು ಕಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ  ಲಕ್ಷ್ಮಣತೀರ್ಥ ನದಿಗೆ ಬಿಟ್ಟರು   

ಗೋಣಿಕೊಪ್ಪಲು: ಪೊನ್ನಂಪೇಟೆ ಬಳಿಯ ಕಿರುಗೂರಿನ ಪೆಮ್ಮಂಡ ಉಮೇಶ್ ಅವರ ಕಾಫಿ ತೋಟದಲ್ಲಿ ಮೊಸಳೆ ಕಾಣಿಸಿಕೊಂಡು ಕೆಲಕಾಲ ಆತಂಕ ಮೂಡಿಸಿತ್ತು.

ವಿಷಯ ತಿಳಿದ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಹುನುಗುಂದ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಮೊಸಳೆಯನ್ನು ಹಿಡಿದು ಲಕ್ಷ್ಮಣತೀರ್ಥ ನದಿಗೆ ಬಿಟ್ಟರು.

ಕಿರಿಗೂರು ಬಳಿ ಹರಿಯುತ್ತಿರುವ ಕೀರೆಹೊಳೆಯಲ್ಲಿ ಬಂದ ಮೊಸಳೆ ಆಹಾರ ಹುಡುಕಿಕೊಂಡು ಕಾಫಿ ತೋಟಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ.

ADVERTISEMENT

ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ನಾಗರಹೊಳೆ ಹೆಬ್ಬಳ್ಳ ಬಳಿಯ ಲಕ್ಷ್ಮಣತೀರ್ಥ ನದಿಗೆ ಬಿಟ್ಟಿದ್ದು, ಮೊಸಳೆ ಅಂದಾಜು 20 ಕೆ.ಜಿ ತೂಕದ್ದಿತ್ತು ಎನ್ನಲಾಗಿದೆ.

ದಕ್ಷಿಣ ಕೊಡಗಿನ ಜನತೆಗೆ ಹುಲಿ, ಕಾಡಾನೆ ಜತೆಗೆ ಮೊಸಳೆ ಕೂಡಾ ಆಗಿದ್ದಾಗೆ ಅಲ್ಲಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.