ADVERTISEMENT

ಸೋಮವಾರಪೇಟೆ | ಸಿಎಸ್ಐ ಸಂತ ಜಾನ್ ದೇವಾಲಯದಲ್ಲಿ ಫಲೋತ್ಸವ ಹಬ್ಬ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 4:49 IST
Last Updated 27 ಅಕ್ಟೋಬರ್ 2025, 4:49 IST
<div class="paragraphs"><p>ಸೋಮವಾರಪೇಟೆ ಪಟ್ಟಣದ ಸಿಎಸ್ಐ ಸಂತ ಜಾನ್ ದೇವಾಲಯದಲ್ಲಿ ನಡೆದ ಫಲೋತ್ಸವ ಹಬ್ಬದಲ್ಲಿ, ಜಾನ್ ಬಾಬು, ಪ್ಲಾರೆನ್ಸ್ ಅವರನ್ನು ಸನ್ಮಾನಿಸಲಾಯಿತು</p></div>

ಸೋಮವಾರಪೇಟೆ ಪಟ್ಟಣದ ಸಿಎಸ್ಐ ಸಂತ ಜಾನ್ ದೇವಾಲಯದಲ್ಲಿ ನಡೆದ ಫಲೋತ್ಸವ ಹಬ್ಬದಲ್ಲಿ, ಜಾನ್ ಬಾಬು, ಪ್ಲಾರೆನ್ಸ್ ಅವರನ್ನು ಸನ್ಮಾನಿಸಲಾಯಿತು

   

ಸೋಮವಾರಪೇಟೆ: ಇಲ್ಲಿನ ಮಹದೇಶ್ವರ ಬ್ಲಾಕ್‌ನ ಸಿಎಸ್ಐ ಸಂತ ಜಾನ್ ದೇವಾಲಯದಲ್ಲಿ ಭಾನುವಾರ ಫಲೋತ್ಸವ ಹಬ್ಬವನ್ನು ಆಚರಿಸಲಾಯಿತು.

ಸದಸ್ಯರು ಬೆಳೆದು ತಂದಂತಹ ಪ್ರಥಮ ಫಲವನ್ನು ಮೆರವಣಿಗೆ ಮೂಲಕ ದೇವಾಲಯಕ್ಕೆ ತರಲಾಯಿತು. ಮುಖ್ಯ ಸಂದೇಶಕರಾದ ಜಾನ್ ಬಾಬು ಅವರು ಹಬ್ಬದ ವಿಶೇಷತೆಯನ್ನು ತಿಳಿಸಿದರು. ದೇವರ ಸಂದೇಶವನ್ನು ಹಂಚಿಕೊಂಡರು. ಹಿರಿಯರಾದ ಜಾನ್ ಬಾಬು, ಫಿಲೋಮಿನ್ ರಾಜ್ ಮತ್ತು ಮಹಿಳಾ ಅನ್ಯೋನ ಕೂಟಗಳ ಉಪಾಧ್ಯಕ್ಷರಾದ ಪ್ಲಾರೆನ್ಸ್ ಅವರುಗಳನ್ನು ಸನ್ಮಾನಿಸಲಾಯಿತು.

ADVERTISEMENT

ಆರಾಧನೆ ನಂತರ ಪ್ರಥಮ ಫಲಗಳನ್ನು ವಿತರಿಸಲಾಯಿತು. ಸಮಾಜ ಬಾಂಧವರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿಯಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಭಾ ಪಾಲನ ಸಮಿತಿ ಸದಸ್ಯರಾದ ಸೊಲೊಮನ್ ಡೇವಿಡ್, ಪುಷ್ಪ ಜಾಯ್, ಆಶಾ ಸಾಲೊಮನ್, ದಿವ್ಯ, ಸ್ಯಾಮುವೇಲ್ ಮನೋಜ್ ಕುಮಾರ್, ಪ್ರಿಯದರ್ಶಿನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.