ADVERTISEMENT

ಶ್ರೀರಂಗಪಟ್ಟಣ: ಪ್ರಯಾಣಿಕರ ತಂಗುದಾಣ ದುರಸ್ತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 13:52 IST
Last Updated 4 ಜೂನ್ 2025, 13:52 IST
ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಗ್ರಾಮದ ಪ್ರಯಾಣಿಕರ ತಂಗುದಾಣ ಶಿಥಿಲವಾಗಿರುವುದು
ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಗ್ರಾಮದ ಪ್ರಯಾಣಿಕರ ತಂಗುದಾಣ ಶಿಥಿಲವಾಗಿರುವುದು   

ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿ ಗ್ರಾಮದ ಪ್ರಯಾಣಿಕರ ತಂಗುದಾಣ ಶಿಥಿವಾಗಿದ್ದು ಕುಸಿದು ಬೀಳುವ ಆತಂಕ ಎದುರಾಗಿದೆ.

ಅರಳಿಕಟ್ಟೆ ವೃತ್ತದಲ್ಲಿರುವ ಪ್ರಯಾಣಿಕರ ತಂಗುದಾಣದ ಚಾವಣಿಯ ಗಾರೆ ಕಿತ್ತು ಬಂದಿದೆ. ಬಸ್‌ಗಳಿಗೆ ಕಾಯುತ್ತಾ ಕೂರುವವರ ಮೇಲೆ ಗಾರೆ ಚಕ್ಕೆಗಳು ಆಗಾಗ ಬೀಳುತ್ತಿವೆ. ತಂಗುದಾಣ ಕಟ್ಟಡದ ಸುತ್ತಲೂ ತಳಪಾಯದಲ್ಲಿ ಶೀತ ಏರಿಕೊಂಡಿದ್ದು, ಬಿರುಕುಗಳು ಕಾಣಿಸಿಕೊಂಡಿವೆ.

ಪ್ರಯಾಣಿಕರ ತಂಗುದಾಣದಲ್ಲಿ ಬೆಳಿಗ್ಗೆಯಿಂದ ಸಂಜೆ ವರೆಗೂ ಮೈಸೂರು ಕಡೆ ಹೋಗುವ ಯಾರಾದರೂ ಕುಳಿತಿರುತ್ತಾರೆ. ಚಾವಣಿ ಕುಸಿದರೆ ಅಪಾಯ ಘಟಿಸಲಿದೆ. ಆದಷ್ಟು ಶೀಘ್ರ ಇದನ್ನು ದುರಸ್ತಿ ಮಾಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.