ADVERTISEMENT

‘ಸಾಮಾಜಿಕ, ಶೈಕ್ಷಣಿಕ ವರದಿ ಬಿಡುಗಡೆಗೆ ಆಗ್ರಹ‘

ಮಡಿಕೇರಿಯಲ್ಲಿ ‘ಅಹಿಂದ’ ಒಕ್ಕೂಟದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 22:00 IST
Last Updated 18 ಫೆಬ್ರುವರಿ 2021, 22:00 IST

ಮಡಿಕೇರಿ: ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಾಜ್ಯದಲ್ಲಿ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಸ್ವೀಕರಿಸಿ, ಬಿಡುಗಡೆ ಮಾಡಬೇಕು ಎಂದು ‘ಅಹಿಂದ’ ಒಕ್ಕೂಟದ ಸ್ಥಳೀಯ ಘಟಕ ಆಗ್ರಹಪಡಿಸಿದೆ.

ಗುರುವಾರ ‍ನಗರದಲ್ಲಿ ಈ ಬಗ್ಗೆ ಪ್ರತಿಭಟನೆ ನಡೆಯಿತು. ‘ವರದಿ ಅನುಷ್ಠಾನಗೊಂಡರೆ, ಮೀಸಲಾತಿ ದೊರಕದಿರುವ ಸಣ್ಣ ಜಾತಿಗಳಿಗೆ ವೈಜ್ಞಾನಿಕವಾಗಿ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ. ರಾಜ್ಯದಲ್ಲಿರುವ ಜಾತಿಗಳ ಅಂಕಿ–ಅಂಶಗಳು ಅಧಿಕೃತವಾಗಿ ದೊರೆಯಲು ಸಾಧ್ಯವಾಗಲಿದೆ’ ಎಂದು ಒಕ್ಕೂಟದ ಸ್ಥಾಪಕ ಅಧ್ಯಕ್ಷ ಟಿ.ಪಿ.ರಮೇಶ್‌ ಹೇಳಿದರು.

ರಾಜ್ಯದಲ್ಲಿ ಮೊದಲ ಬಾರಿಗೆ ಬಹುತೇಕ ಜಾತಿಗಳು ಮೀಸಲಾತಿಗೆ ಆಗ್ರಹಿಸಿ, ಬೀದಿಗಿಳಿದು ಹೋರಾಟ ನಡೆಸುತ್ತಿವೆ. ಕೊಡಗಿನಲ್ಲೂ ಅನೇಕ ಸಣ್ಣ ಸಮುದಾಯಗಳಿವೆ. ಆ ಸಮುದಾಯಗಳಿಗೂ ಮೀಸಲಾತಿ ಸಿಗಬೇಕಿದೆ ಎಂದು ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.