ಸೋಮವಾರಪೇಟೆ: ಯಡವನಾಡು ಅರಣ್ಯ ಸಮೀಪ ಸೂಳೆಬಾವಿ ತಿರುವಿನಲ್ಲಿ ಕಾಡಾನೆಯೊಂದು ಹಾಲು ಸರಬರಾಜು ಮಾಡುವ ವಾಹನದ ಮೇಲೆ ಶನಿವಾರ ಬೆಳಿಗ್ಗೆ ದಾಳಿ ಮಾಡಿದೆ.
ಕೂಡಿಗೆ ಡೇರಿಯಿಂದ ಪ್ರತಿನಿತ್ಯ ನಂದಿನಿ ಹಾಲು ಸರಬರಾಜು ಮಾಡುವ ವಾಹನ ಸೋಮವಾರಪೇಟೆಗೆ ತೆರಳುತ್ತಿತ್ತು. ಕಾಡಾನೆ ಮುಖ್ಯರಸ್ತೆಯನ್ನು ದಾಟಿದೆ. ಇದೇ ಮಾರ್ಗವಾಗಿ ತೆರಳುತ್ತಿದ್ದ ವ್ಯಾನ್ ಚಾಲಕ ಮತ್ತೊಂದು ಆನೆ ಕಾಡಿನಿಂದ ಮುಖ್ಯ ರಸ್ತೆಗೆ ಬರುತ್ತಿರುವುದನ್ನು ಗಮನಿಸದೆ ಮುಂದುವರೆದಿದ್ದಾರೆ. ಈ ಸಂದರ್ಭ ಏಕಾಏಕಿ ರಸ್ತೆಗೆ ಬಂದ ಕಾಡಾನೆ ವ್ಯಾನ್ ಮೇಲೆ ದಾಳಿ ಮಾಡಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.