
ಮಡಿಕೇರಿ: ವ್ಯಕ್ತಿಯೊಬ್ಬರ ಬೆತ್ತಲೆ ವಿಡಿಯೊ ಮಾಡಿ ₹50 ಲಕ್ಷಕ್ಕೆ ನೀಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ ಕುರಿತು ಇಬ್ಬರು ಮಹಿಳೆಯರೂ ಸೇರಿ 6 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಎಚ್.ಪಿ.ಮಹದೇವ್ (39) ಹಲ್ಲೆಗೆ ಒಳಗಾದವರು.
ಫೇಸ್ ಬುಕ್‌ನಲ್ಲಿ ಪರಿಚಯವಾದ ಮಡಿಕೇರಿಯ ಮಹಿಳೆಯೊಬ್ಬರು ಕಷ್ಟ ಎಂದು ಹೇಳಿಕೊಂಡು ₹10 ಸಾವಿರ ಹಣ ಪಡೆದಿದ್ದರು. ನಂತರ ಹಣ ವಾಪಸ್ ಕೊಡುವುದಾಗಿ ಹೇಳಿ ಶುಕ್ರವಾರ ಮಡಿಕೇರಿಗೆ ಬರಮಾಡಿಕೊಂಡು ಮನೆಗೆ ಕರೆದುಕೊಂಡು ಹೋಗಿದ್ದಳು.
ರಾತ್ರಿ 11.45 ರ ಸುಮಾರಿನಲ್ಲಿ ಮನೆಗೆ ಬಂದ ಯುವತಿಯ ತಾಯಿ ಹಾಗೂ ಇತರ ನಾಲ್ವರು ಯುವತಿ ಹಾಗೂ ಆಕೆಯ ತಾಯಿಯನ್ನು ಬೇರೆಡೆ ಕಳುಹಿಸಿ ಬಲವಂತವಾಗಿ ಬಟ್ಟೆ ಬಿಚ್ಚಿಸಿ ವಿಡಿಯೊ ಮಾಡಿಕೊಂಡು ಮನಬಂದಂತೆ ಥಳಿಸಿದ್ದಾರೆ. ಬಳಿಕ ಮಹದೇವ್ ಅಲ್ಲಿಂದ ತಪ್ಪಿಸಿಕೊಂಡು ಅರೆಬೆತ್ತಲೆ ಸ್ಥಿತಿಯಲ್ಲಿ ಠಾಣೆಗೆ ಬಂದು ದೂರು ನೀಡಿದ್ದು ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.