ADVERTISEMENT

ಗೋಣಿಕೊಪ್ಪಲು | ಕುಟುಂಬ ಒಟ್ಟಾಗಿ ಹಬ್ಬ ಆಚರಿಸಲು ಪೊನ್ನಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 6:24 IST
Last Updated 10 ಅಕ್ಟೋಬರ್ 2025, 6:24 IST
ಗೋಣಿಕೊಪ್ಪಲು ಬಳಿಯ ಕೆಕೆಆರ್ ನಲ್ಲಿ ನಡೆದ ಕೈಲ್ ಪೊಳ್ದು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರ
ಗೋಣಿಕೊಪ್ಪಲು ಬಳಿಯ ಕೆಕೆಆರ್ ನಲ್ಲಿ ನಡೆದ ಕೈಲ್ ಪೊಳ್ದು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರ   

ಗೋಣಿಕೊಪ್ಪಲು:  ಕುಟುಂಬದ ಸದಸ್ಯರೆಲ್ಲ ಒಟ್ಟಿಗೆ ಸೇರಿ ಸ್ಥಳೀಯ ಹಬ್ಬಗಳನ್ನು ಆಚರಿಸುವಂತಾಗಬೇಕು. ಸಾಮಾಜಿಕ ಕೆಲಸ ಕಾರ್ಯ ಹಾಗೂ ಪ್ರವಾಸ ಇದೇ ರೀತಿ ಇರಬೇಕು ಎಂದು ಕೆಕೆಆರ್ ಸಂಸ್ಥೆಯ ಅಧ್ಯಕ್ಷ ಅಣ್ಣೀರ ಕೆ.ಪೊನ್ನಪ್ಪ ಹೇಳಿದರು.

ಪೊನ್ನಂಪೇಟೆ ತಾಲ್ಲೂಕು ಪೊರಾಡು ರಿವರ್ ಸೈಡ್ ಅಸೋಸಿಯೇಷನ್ ಆಯೋಜಿಸಿದ್ದ ಕೈಲ್ ಪೋಳ್ದ್ ಹಬ್ಬದ ಸಂತೋಷ ಕೂಟ ಹಾಗೂ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು. 

ತೆಂಗಿನ ಕಾಯಿ ಒಡೆಯುವ ಸ್ಪರ್ಧೆಯ ಮೂಲಕ ಹಿರಿಯರಾದ ಬಲ್ಯಮೀದೇರಿರ ನಾಚಪ್ಪ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಮಹಿಳೆಯರು,  ಮಕ್ಕಳು ಹಾಗೂ ಪುರುಷರಿಗೆ ಪ್ರತ್ಯೇಕವಾದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.  ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮೀದೇರಿರ ಸಾಕ್ಷಿ ಮುತ್ತಮ್ಮ, ಕಾರ್ಯದರ್ಶಿ ಮೀದೇರಿರ ಎ.ಸೋಮಣ್ಣ  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.