ಸುಂಟಿಕೊಪ್ಪ: ಇಲ್ಲಿನ ಎಸ್.ಎನ್.ಡಿ.ಪಿ ಘಟಕದ ಅಧ್ಯಕ್ಷರಾಗಿ ನೇಮಕವಾದ ಪ್ರಸಾದ್ ಕುಟ್ಟಪ್ಪ ಅವರನ್ನು
ಗ್ರಾಮ ಪಂಚಾಯಿತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಪ್ರಸಾದ್ ಕುಟ್ಟಪ್ಪ ಮಾತನಾಡಿ, ‘ಸರ್ವರನ್ನೂ ಸಮಾನ ದೃಷ್ಟಿಯಿಂದ ನೋಡುವ, ಸಮಾಜಕ್ಕೆ ನಾರಾಯಣ ಗುರುಗಳ ಆದರ್ಶವನ್ನು ಸಾರುವ ಒಂದು ದೊಡ್ಡ ಜವಾಬ್ದಾರಿಯನ್ನು ನನಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಾರಾಯಣ ಗುರುಗಳ ಸಂಕಲ್ಪದ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಪಿಡಿಒ ವಿ.ಜಿ ಲೋಕೇಶ್, ಸದಸ್ಯರಾದ ಸಬಾಸ್ಟೀನ್, ಸುರೇಶ್, ವಸಂತಿ, ನಾಗರತ್ನಾ, ಮಂಗಳಾ, ಗೀತಾ, ರಫೀಕ್ ಖಾನ್, ಜಿನಾಷುದ್ದೀನ್, ಸೋಮನಾಥ್, ವನಿತಾ, ಆಲಿಕುಟ್ಟಿ, ಶಬ್ಬೀರ್, ಸಿಬ್ಬಂದಿ ಚಂದ್ರಕಲಾ, ಸಂಧ್ಯಾ, ಶ್ರೀನಿವಾಸ್, ಮಂಜುನಾಥ್, ರಂಗಸ್ವಾಮಿ, ಮಂದಣ್ಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.