ADVERTISEMENT

ಕುಶಾಲನಗರ: ಹಸಿದವರಿಗೆ ಅನ್ನ ಯೋಜನೆಗೆ ಚಾಲನೆ

ರೋಟರಿ ಸಂಸ್ಥೆ ವತಿಯಿಂದ ಸಮಾಜಮುಖಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 13:25 IST
Last Updated 30 ಜೂನ್ 2025, 13:25 IST
ಕುಶಾಲನಗರ ನಿಸರ್ಗ ಹೋಟೆಲ್‌ನಲ್ಲಿ ರೋಟರಿ ಸಂಸ್ಥೆಯಿಂದ ಸೋಮವಾರ ರೋಟರಿ ಅಧ್ಯಕ್ಷ ಮನುಪೆಮ್ಮಯ್ಯ ನಿರ್ಗತಿಕರಿಗೆ, ಆಟೊ ಚಾಲರಿಗೆ ಕೂಪನ್ ನೀಡುವ ಮೂಲಕ ಹಸಿದವರಿಗೆ ಅನ್ನ ಯೋಜನೆಗೆ ಚಾಲನೆ ನೀಡಿದರು 
ಕುಶಾಲನಗರ ನಿಸರ್ಗ ಹೋಟೆಲ್‌ನಲ್ಲಿ ರೋಟರಿ ಸಂಸ್ಥೆಯಿಂದ ಸೋಮವಾರ ರೋಟರಿ ಅಧ್ಯಕ್ಷ ಮನುಪೆಮ್ಮಯ್ಯ ನಿರ್ಗತಿಕರಿಗೆ, ಆಟೊ ಚಾಲರಿಗೆ ಕೂಪನ್ ನೀಡುವ ಮೂಲಕ ಹಸಿದವರಿಗೆ ಅನ್ನ ಯೋಜನೆಗೆ ಚಾಲನೆ ನೀಡಿದರು    

ಕುಶಾಲನಗರ: ಸ್ಥಳೀಯ ರೋಟರಿ ಸಂಸ್ಥೆಗೆ ಸುವರ್ಣ ಮಹೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಹಸಿದವರಿಗೆ ಅನ್ನ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಇಲ್ಲಿನ ನಿಸರ್ಗ ಹೋಟೆಲ್ ನಲ್ಲಿ ರೋಟರಿ ಸಂಸ್ಥೆಯಿಂದ ಸೋಮವಾರ ರೋಟರಿ ಅಧ್ಯಕ್ಷ ಮನುಪೆಮ್ಮಯ್ಯ ನಿರ್ಗತಿಕರಿಗೆ, ಆಟೊ ಚಾಲರಿಗೆ ಕೂಪನ್ ಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂಸ್ಥೆ ಅಧ್ಯಕ್ಷ ಮನುಪೆಮ್ಮಯ್ಯ ಮಾತನಾಡಿ, ‘ರೋಟರಿಯ ಸುವರ್ಣ ಮಹೋತ್ಸವ ಅಂಗವಾಗಿ ಹಸಿದವರಿಗೆ ಅನ್ನ ಎಂಬ ವಿನೂತನ ಯೋಜನೆ ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನ ತಿಂಡಿ ಮತ್ತು ಮಧ್ಯಾಹ್ನದ ಊಟವನ್ನು ಅರ್ಹರಿಗೆ ಉಚಿತವಾಗಿ ಒದಗಿಸಲಾಗುತ್ತದೆ. ಎರಡೂ ವೇಳೆಯಲ್ಲಿ ಹೋಟೆಲ್ ಮೂಲಕ ಉಚಿತವಾಗಿ ಒದಗಿಸಿದ ಆಹಾರಕ್ಕೆ ರೋಟರಿಯಿಂದ ಹಣ ಪಾವತಿಸಲಾಗುತ್ತದೆ. ಊಟಕ್ಕಾಗಿ ಪರಿತಪಿಸುವ ಅರ್ಹರು ಈ ಯೋಜನೆ ಸದುಪಯೋಗಪಡಿಸಿಕೊಳ್ಳಬಹುದು. ಇದು ರೋಟರಿಯ ನಿರಂತರ ಯೋಜನೆಯಾಗಿದೆ’ ಎಂದು ಹೇಳಿದರು.

ADVERTISEMENT

ಹೋಟೆಲ್ ಮಾಲೀಕರು ಅರ್ಹ ಫಲಾನುಭವಿಗಳ ಬಗ್ಗೆ ನಿಗಾವಹಿಸಲಿದ್ದಾರೆ. ಸಾರ್ವಜನಿಕರು, ದಾನಿಗಳು ಕೂಡ ಈ ಯೋಜನೆಗೆ ಸಹಕಾರ ನೀಡಬಹುದು ಎಂದು ಅವರ ಕೋರಿದರು.

ಸಂಸ್ಥೆ ಕಾರ್ಯದರ್ಶಿ ಎಚ್.ಪಿ.ಮಂಜುನಾಥ್, ಸಹಾಯಕ ಗವರ್ನರ್ ಉಲ್ಲಾಸ್ ಕೃಷ್ಣ, ರೋಟರಿ ಹಿರಿಯ ಸದಸ್ಯರಾದ ಮಹೇಶ್ ನಾಲ್ವಡಿ, ಡಾ.ಹರಿ ಎ ಶೆಟ್ಟಿ, ಆರತಿ ಶೆಟ್ಟಿ, ರಿಚರ್ಡ್, ಗಂಗಾಧರ್, ಪ್ರಕಾಶ್, ಸುದೀಶ್,ನಿಸರ್ಗ ಹೋಟೆಲ್ ಮಾಲೀಕ ನಾರಾಯಣ್ ಮತ್ತಿತರರು ಪಾಲ್ಗೊಂಡಿದ್ದರು.

ಅರ್ಹರಿಗೆ ಪ್ರತಿ ದಿನ ತಿಂಡಿ, ಮಧ್ಯಾಹ್ನದ ಊಟ ವಿತರಣೆ ಹೋಟೆಲ್ ಮೂಲಕ ಉಚಿತ ಆಹಾರ ರೋಟರಿ ಸಂಸ್ಥೆಯಿಂದ ಹಣ ಪಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.