ಮಡಿಕೇರಿ: ಸಿದ್ದಾಪುರ ಸಮೀಪದ ಬಾಡಗ–ಬಾಣಂಗಾಲ ಗ್ರಾಮದ ಹುಂಡಿ ಪ್ರದೇಶದ ತೋಟವೊಂದರ ಕಣದಲ್ಲಿ ಒಣಗಿಸಲು ಹರಡಿದ್ದ ಕಾಫಿಯನ್ನು ಕಳ್ಳತನ ಮಾಡಿದ ಆರೋಪದ ಮೇರೆಗೆ ಕೆ.ಬಿ.ಶಫೀಕ್ (26), ಟಿ.ಜೆ.ಫ್ರಾನ್ಸಿಸ್ (29), ಎಂ.ಬಿ.ಯಾಸಿನ್ (28) ಹಾಗೂ ಎಂ.ಜಿ.ಅನೀಸ್ (24) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಇವರಿಂದ ಒಟ್ಟು 2,550 ಕೆ.ಜಿವುಳ್ಳ 51 ಚೀಲ ಕಾಫಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರು ವಿರಾಜಪೇಟೆ ನಗರ ಮತ್ತು ಗ್ರಾಮಾಂತರ ಭಾಗದಲ್ಲೂ ಕಾಫಿಯನ್ನು ಕಳವು ಮಾಡಿದ್ದರು ಎಂದು ಅವರು ಹೇಳಿದ್ದಾರೆ.
ಕಾಫಿ ಖರೀದಿ ಮಾಡುವವರು ಮಾರಾಟ ಮಾಡುವವರ ಸಂಪೂರ್ಣ ವಿವರ ಇಟ್ಟುಕೊಳ್ಳದೇ, ಬಿಲ್ಲು ನೀಡದೇ ಖರೀದಿಸಿದರೆ ಅಂತಹವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.