ಗೋಣಿಕೊಪ್ಪಲು: ಪೊನ್ನಂಪೇಟೆಯಲ್ಲಿ ಗೌರಿ– ಗಣೇಶ ಪ್ರತಿಷ್ಠಾಪನೆ ಕಾರ್ಯ ಅದ್ಧೂರಿಯಾಗಿ ನೆರವೇರಿತು.
ಬಸವೇಶ್ವರ ದೇವಸ್ಥಾನ, ಕೃಷ್ಣ ನಗರದ ಕೃಷ್ಣಯುವಕ ಸಂಘ, ಶಿವ ಕಾಲೊನಿಯ ಶಿವ ಯುವಕ ಸಂಘ, ಯುವಶಕ್ತಿ ಯುವಕ ಸಂಘ, ವಿಘ್ನೇಶ್ವರ ವಾಹನ ಚಾಲಕ ಮತ್ತು ಮಾಲೀಕರ ಸಂಘ, ಕಾಟ್ರಕೊಲ್ಲಿಯ ಗಜಮುಖ ಗೆಳೆಯರ ಬಳಗ, ನೆಹರು ನಗರದ ವಿನಾಯಕ ಯುವಕ ಸಂಘ, ಕಾವೇರಿನಗರದ ಗಜಾನನ ಸ್ನೇಹಿತರ ಬಳಗದವರು ಗಣಪತಿ ಮೂರ್ತಿಗಳನ್ನು ಒಟ್ಟಿಗೆ ಪಟ್ಟಣದ ಬಸವೇಶ್ವರ ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಿದರು.
ಪ್ರತಿಷ್ಠಾಪನೆಗೂ ಮುನ್ನ ಚಂಡೆ, ಕೊಡವ ವಾಲಗ, ಮದ್ದಳೆ ಮದಲಾದ ವಾದ್ಯಗಳ ಮೂಲಕ ಅದ್ಧೂರಿಯಾಗಿ ಮೆರವಣಿಗೆ ನಡೆಸಿದರು. ಮೆರಣಿಗೆಯಲ್ಲಿ ವೀರಭದ್ರ ಕುಣಿತ, ಬೊಂಬೆ ಕುಣಿತ ಗಮನ ಸೆಳೆದವು. ಆಯಾ ಸಂಘದ ಜನರು ಕೂಡ ವಾದ್ಯದ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು.
ಸಾಮಾನ್ಯವಾಗಿ ಗಣಪತಿ ವಿಸರ್ಜನೆ ವೇಳೆಯಲ್ಲಿ ಇಂಥ ಸಡಗರವನ್ನು ಕಾಣಲು ಸಾಧ್ಯವಿತ್ತು. ಆದರೆ ಈ ಬಾರಿ ಪ್ರತಿಷ್ಠಾಪನೆ ಸಂದರ್ಭದಲ್ಲಿಯೇ ಸಂಭ್ರಮ ಮನೆಮಾಡಿತ್ತು. ಗಣಪತಿ ಮೂರ್ತಿಗಳನ್ನು ಸೆ.14ರ ರಾತ್ರಿ ಪೊನ್ನಂಪೇಟೆ ಪಟ್ಟಣದಲ್ಲಿ ಅದ್ಧೂರಿ ಮೆರವಣೆಗೆ ನಡೆಸಿ ವಿಸರ್ಜಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.