ADVERTISEMENT

ಗೋಣಿಕೊಪ್ಪಲು | ಮಾದಕ ವಸ್ತು ತಡೆ ಜಾಗೃತಿ ಮೇ 27ರಂದು

​ಪ್ರಜಾವಾಣಿ ವಾರ್ತೆ
Published 25 ಮೇ 2025, 14:44 IST
Last Updated 25 ಮೇ 2025, 14:44 IST

ಗೋಣಿಕೊಪ್ಪಲು: ಇಲ್ಲಿನ ಯುನೈಟೆಡ್ ಜಮಾಅತ್ ನಿಂದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗಾಗಿ ಮಾದಕ ವಸ್ತು ವಿರೋಧಿ ಜಾಗೃತಿ, ವೃತ್ತಿ ಜೀವನ ಮಾರ್ಗದರ್ಶ ಶಿಬಿರವನ್ನು ಮೇ 27ರಂದು ಆಯೋಜಿಸಲಾಗಿದೆ ಎಂದು ಜಮಾಅತ್ತಿನ ಅಧ್ಯಕ್ಷ ಎಂ.ಎ.ಸಮೀರ್ ತಿಳಿಸಿದ್ದಾರೆ.

'ನಮ್ಮ ನಡೆ ಮಾದಕ ವಸ್ತು ಮುಕ್ತ ಸಮಾಜ ಮತ್ತು ಅರಿವಿನ ಕಡೆ'  ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮವು  ಕೊಡಗು ಇಂಟರ್ ನ್ಯಾಷನಲ್ ಕಮ್ಯುನಿಟಿ ಸಭಾಂಗಣದಲ್ಲಿ ಜರುಗಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ  ಜಮಾಅತ್ತಿನ ಅಧ್ಯಕ್ಷರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಪಾಲ್ಗೊಳ್ಳಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಉಮೀದ್ ರಿಹೆಬ್ ಸೆಂಟರ್ ವ್ಯವಸ್ಥಾಪಕ ನಿರ್ದೇಶಕ  ಮೊಹಮ್ಮದ್ ರಫಿಉದ್ದೀನ್ ರಶೀದ್ ಹಾಗೂ ಪುಣೆಯ ಅನೀಶ್ ಕುಟ್ಟಿ  ಭಾಗವಹಿಸುವರು ಎಂದರು.  ವಿದ್ಯಾರ್ಥಿಗಳು ಅಂದು ಬೆಳಿಗ್ಗೆ 9 ಗಂಟೆಯಿಂದ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

  ಸಂಸ್ಥೆಯ  ಕಾರ್ಯದರ್ಶಿ ಟಿ.ಕೆ.ಅಬ್ದುಲ್ ಸಮದ್ ಮಾತನಾಡಿ, ಜಿಲ್ಲೆ ಪೂರ್ಣವಾಗಿ ಮಾದಕ ವ್ಯಸನದಿಂದ ಮುಕ್ತವಾಗಬೇಕು. ವಿದ್ಯಾರ್ಥಿಗಳನ್ನೇ ಹೆಚ್ಚಾಗಿ ಕೇಂದ್ರೀಕರಿಸಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದರು.
 ಸಂಸ್ಥೆಯ  ಗೌರವಾಧ್ಯಕ್ಷ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು), ಸಂಚಾಲಕರಾದ ತನ್ವೀರ್ ಅಹಮದ್, ಕಾರ್ಯಕಾರಿ ಸಮಿತಿ ಸದಸ್ಯ ಅಬ್ದುಲ್ ನಾಸರ್, ನಜೀರ್ ಮೌಲವಿ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.