ADVERTISEMENT

ಮುದ್ದಂಡ ಕಪ್ | ಸಿಂಚನ್ ಹ್ಯಾಟ್ರಿಕ್ ಗೋಲು: ತೀತಿರ ತಂಡಕ್ಕೆ ಗೆಲುವು

5'ಎ ಸೈಡ್ ಮಹಿಳಾ ಹಾಕಿ ಟೂರ್ನಿಯಲ್ಲಿ ರೋಚಕ ಪಂದ್ಯಗಳು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 8:07 IST
Last Updated 23 ಏಪ್ರಿಲ್ 2025, 8:07 IST
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಮುದ್ದಂಡ ಕಪ್‌ನಲ್ಲಿ ಮಂಗಳವಾರ ನಡೆದ 5'ಎ ಸೈಡ್ ಮಹಿಳಾ ಹಾಕಿ ಟೂರ್ನಿಯಲ್ಲಿ ಮುಕ್ಕಾಟಿರ (ದೊಡ್ಡಪುಲಿಕೋಟು) ಮತ್ತು ತೀತರಮಾಡ ತಂಡಗಳ ಆಟಗಾರ್ತಿಯರು ಗೆಲುವಿಗಾಗಿ ಸೆಣಸಾಟ ನಡೆಸಿದರು
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಮುದ್ದಂಡ ಕಪ್‌ನಲ್ಲಿ ಮಂಗಳವಾರ ನಡೆದ 5'ಎ ಸೈಡ್ ಮಹಿಳಾ ಹಾಕಿ ಟೂರ್ನಿಯಲ್ಲಿ ಮುಕ್ಕಾಟಿರ (ದೊಡ್ಡಪುಲಿಕೋಟು) ಮತ್ತು ತೀತರಮಾಡ ತಂಡಗಳ ಆಟಗಾರ್ತಿಯರು ಗೆಲುವಿಗಾಗಿ ಸೆಣಸಾಟ ನಡೆಸಿದರು   

ಮಡಿಕೇರಿ: ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಮುದ್ದಂಡ ಕಪ್‌ನಲ್ಲಿ ಮಂಗಳವಾರ ನಡೆದ 5'ಎ ಸೈಡ್ ಮಹಿಳಾ ಹಾಕಿ ಟೂರ್ನಿಯಲ್ಲಿ ಸಿಂಚನ್ ಗಳಿಸಿದ ಹ್ಯಾಟ್ರಿಕ್ ಗೋಲಿನ ನೆರವಿನಿಂದ ತೀತಿರ ತಂಡವು 3-0 ಯಿಂದ ಕೂತಂಡ ವಿರುದ್ಧ ಜಯ ಸಾಧಿಸಿತು.

ಶಿವಚಾಳಿಯಂಡ ಮತ್ತು ಪಾಡೆಯಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಶಿವಚಾಳಿಯಂಡ ಭರ್ಜರಿ ಗೆಲುವು ಪಡೆಯಿತು.

ಉಳಿದಂತೆ, ಚೆಯ್ಯಂಡ 4-0 ಯಿಂದ ಪಟ್ಟಡ ವಿರುದ್ಧ, ಆದೇಂಗಡ 2-1ರಿಂದ ಬೊಳ್ಳೇರ ವಿರುದ್ಧ, ಕಂಬೀರಂಡ 2-1ರಿಂದ ಮಚ್ಚಮಾಡ ವಿರುದ್ಧ, ಮುಕ್ಕಾಟಿರ (ದೊಡ್ಡಪುಲಿಕೋಟು) 1-0 ಯಿಂದ ತೀತರಮಾಡ ವಿರುದ್ಧ, ಗುಡ್ಡಂಡ 2-1ರಿಂದ ಮಂಡೇಪಂಡ ವಿರುದ್ಧ, ಪಾಡೆಯಂಡ 1-0ಯಿಂದ ಅಮ್ಮಣಿಚಂಡ ವಿರುದ್ಧ, ಪೊರುಕೊಂಡ 1-0ಯಿಂದ ಬೊಟ್ಟೋಳಂಡ ವಿರುದ್ಧ, ಕಲಿಯಂಡ 2-0ಯಿಂದ ಸಿದ್ದಂಡ ವಿರುದ್ಧ ಗೆಲುವು ಸಾಧಿಸಿದವು.

ADVERTISEMENT

ನಾಟೋಳಂಡ ಮತ್ತು ಮುದ್ದಂಡ ನಡುವಿನ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಉಭಯ ತಂಡಗಳು ಯಾವುದೇ ಗೋಲು ಗಳಿಸಲಿಲ್ಲ. ಟೈ ಬ್ರೇಕರ್‌ನಲ್ಲಿ 2-1 ಅಂತರದಲ್ಲಿ ನಾಟೋಳಂಡ ಜಯ ಸಾಧಿಸಿತು.

ಸಣ್ಣುವಂಡ ಮತ್ತು ಕೋಡಿಮಣಿಯಂಡ ನಡುವಿನ ಪಂದ್ಯವೂ ಇದೇ ಬಗೆಯಲ್ಲಿ ರೋಚಕ ತಿರುವು ಪಡೆಯಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ 1 ಗೋಲು ಗಳಿಸಿ ಸಮಬಲ ಸಾಧಿಸಿದವು. ಟೈ ಬ್ರೇಕರ್‌ನಲ್ಲಿ 1-0 ಅಂತರದಲ್ಲಿ ಸಣ್ಣವಂಡ ತಂಡ ಜಯ ಸಾಧಿಸಿತು.

ಇನ್ನು ಸಡನ್ ಡೆತ್‌ನಲ್ಲಿ ಮುಕ್ಕಾಟಿರ (ದೊಡ್ಡಪುಲಿಕೋಟು) 1-0ಯಿಂದ ಪರದಂಡ ವಿರುದ್ಧ, ಸಣ್ಣುವಂಡ 1-0ಯಿಂದ ಗುಡ್ಡಂಡ ವಿರುದ್ಧ ಗೆಲುವು ಪಡೆದವು. ಮುಕ್ಕಾಟಿರ ಪರ ಸ್ಮಿತಾ ಸುಬ್ಬಯ್ಯ ಹಾಗೂ ಸಣ್ಣುವಂಡ ಪರ ಇಶಿತಾ ನಿರ್ಣಾಯಕ ಗೋಲು ಗಳಿಸಿ, ತಮ್ಮ ತಮ್ಮ ತಂಡಗಳಿಗೆ ಗೆಲುವು ತಂದು ಕೊಟ್ಟರು.

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಮುದ್ದಂಡ ಕಪ್‌ನಲ್ಲಿ ಮಂಗಳವಾರ ನಡೆದ 5

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.