
ಮಡಿಕೇರಿ: ಗೃಹರಕ್ಷಕರು ಪೊಲೀಸರಿಗೆ ಬೆನ್ನುಲುಬಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರು ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಪಿ.ದಿನೇಶ್ ಕುಮಾರ್ ತಿಳಿಸಿದರು.
ಕೊಡಗು ಜಿಲ್ಲಾ ಗೃಹರಕ್ಷಕದಳ ವತಿಯಿಂದ ಜಿಲ್ಲಾ ಗೃಹರಕ್ಷಕದಳ ಕಚೇರಿ ಆವರಣದಲ್ಲಿ ಶನಿವಾರ ನಡೆದ ಗೃಹರಕ್ಷಕ ದಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಇದಕ್ಕೂ ಮುನ್ನ ಘಟಕಾಧಿಕಾರಿ ವೈ.ಎನ್.ಕವನ್‌ಕುಮಾರ್ ನೇತೃತ್ವದಲ್ಲಿ ಗೌರವ ವಂದನೆ ಸಲ್ಲಿಸಲಾಯಿತು. ಉತ್ತಮ ಸೇವೆ ಸಲ್ಲಿಸಿದ 9 ಮಂದಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ, ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕೆ.ಯು.ಮುತ್ತಪ್ಪ, ಎಚ್.ಆರ್.ಪಲ್ಲವಿ, ಕೆ.ಸಿ.ಸಂತೋಷ್‌ಕುಮಾರ್, ವಿ.ಲಕ್ಷ್ಮೀ, ಕೆ.ಡಿ.ಮಂಜುನಾಥ್, ಎಚ್.ಜಿ.ರಂಜಿನಿ, ಕೆ.ಡಿ.ರಘುಕುಮಾರ್, ಯು.ಎನ್.ದರ್ಶನ್, ಎ.ಕವಿತಾ ಅವರು ಉತ್ತಮ ಸೇವೆಗಾಗಿ ಸ್ಮರಣಿಕೆ ಸ್ವೀಕರಿಸಿದರು.
ನಿವೃತ್ತರಾದ ಕೆ.ಯು.ಮುತ್ತಪ್ಪ ಮತ್ತು ಎಲ್.ಬಿ.ಉದಯಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಸುಮಾರು 80ಕ್ಕೂ ಅಧಿಕ ಮಂದಿ ಗೃಹರಕ್ಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಹಾಯಕ ಆಡಳಿತಾಧಿಕಾರಿ ನಂಜಪ್ಪ, ಸಿಪಿಐ ರಾಜು, ಇನ್‌ಸ್ಪೆಕ್ಟರ್ ಐ.ಪಿ.ಮೇದಪ್ಪ, ಜಿಲ್ಲಾ ಬೋಧಕ ಅಕ್ಷಯ್, ಕಚೇರಿ ಸಿಬ್ಬಂದಿ ವಿದ್ಯಾಶ್ರೀ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.