ADVERTISEMENT

ಸೋಮವಾರಪೇಟೆ | ಅಕ್ರಮ ಕಲ್ಲುಗಣಿಗಾರಿಕೆ: ತಡೆಗೆ ಸೂಚನೆ

ನೇರುಗಳಲೆಯಲ್ಲಿ ಸಭೆ; ಗಣಿ ಭೂವಿಜ್ಞಾನಾಧಿಕರಿಗಳಿಗೆ ತಹಶೀಲ್ದಾರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 5:02 IST
Last Updated 24 ಸೆಪ್ಟೆಂಬರ್ 2025, 5:02 IST
ಸೋಮವಾರಪೇಟೆ ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿ ಸ್ಥಳವನ್ನು ಅಧಿಕಾರಿಗಳು ಪರಿಶೀಲಿಸಿದರು.
ಸೋಮವಾರಪೇಟೆ ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿ ಸ್ಥಳವನ್ನು ಅಧಿಕಾರಿಗಳು ಪರಿಶೀಲಿಸಿದರು.   

ಸೋಮವಾರಪೇಟೆ: ತಾಲ್ಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಗ್ರಾಮದ ಶೇ 90 ರಷ್ಟು ಜನರಲ್ಲಿ ಶ್ವಾಸ ಕೋಶ ಸಂಬಂಧಿತ ಕಾಯಿಲೆ ಕಂಡು ಬಂದಿದ್ದು, ಕಲ್ಲು ಗಣಿಗಾರಿಕೆ ನಿಲ್ಲಿಸಿ, ಇಲ್ಲ ದಯಮಾರಣ ನೀಡಿ ಎಂದು ಹೊಸಳ್ಳಿ ಗ್ರಾಮಸ್ಥರ ಮಂಗಳವಾರ ತಹಶೀಲ್ದಾರ್ ಕೃಷ್ಣಮೂರ್ತಿ ಸಮ್ಮುಖದಲ್ಲಿ ಒತ್ತಾಯಿಸಿದದರು.

ಮಂಗಳವಾರ ಹೊಸಳ್ಳಿ ಗ್ರಾಮ ತಹಶೀಲ್ದಾರ್ ಕೃಷ್ಣಮೂರ್ತಿ ನೇತೃತ್ವದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ ತಾಲ್ಲೂಕಿನ ವಿವಿಧ ಇಲಾಖಾಧಿಕಾರಿಗಳ ಸಭೆ ನಡೆಯಿತು. ಗ್ರಾಮದಲ್ಲಿ 17 ಕಲ್ಲು ಗಣಿ ನಡೆಯುತ್ತಿದ್ದು, ಇದರಲ್ಲಿ ಬಹುತೇಕ ಅಕ್ರಮ ಎಂದು ಗ್ರಾಮಸ್ಥರು ತಹಶೀಲ್ದಾರರಲ್ಲಿ ದೂರಿದರು.  ಲೋಕಾಯುಕ್ತ , ಇತರ ಇಲಾಖೆಗೆ ದೂರು ಸಲ್ಲಿಸಿದ್ದು, ಕ್ರಮ ಆಗಿಲ್. ಗಣಿಗಾರಿಕೆ ನೆಡೆಸುವವರ ಜೊತೆ ಅಧಿಕಾರಿಗಳು ಶಾಮಿಲಾಗಿದ್ದಾರೆ. ಗ್ರಾಮಸ್ಥರ  ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮದ ಬೋಜೇಗೌಡ, ತಿಮ್ಮಯ್ಯ ತಿಳಿಸಿದರು. . ಗ್ರಾಮೀಣ ರಸ್ತೆಯಲ್ಲಿ ಭಾರ ಮಿತಿ ಇಲ್ಲದೆ ಹತ್ತು ಚಕ್ರದ ಟಿಪ್ಪರ್ ಗಳು ಓಡಾಡುತ್ತಿವೆ. ಸಂಜೆ ಹೊತ್ತಿನಲ್ಲಿ  ಕೊರೆಗಳಲ್ಲಿ ಬ್ಲಾಸ್ಟಿಂಗ್ ನಡೆಯುತ್ತಿದ್ದು,  ಪಕ್ಕದ ಮನೆಗಳು ಬಿರುಕು ಬಿಟ್ಟಿವೆ. ಕ್ರಷರ್  ವ್ಯಾಪಿಸಿದ್ದು, ವ್ಯವಸಾಯ ಮಾಡಲು ಆಗುತ್ತಿಲ್ಲ ಎಂದು ದೂರಿದರು.

 ಈ ಭಾಗದಲ್ಲಿ ಸಿ ಮತ್ತು ಡಿ ವರ್ಗದ ಜಮೀನು ಇದೆ, ಗ್ರಾಮಕ್ಕೆ ಜೇನುಕಲ್ಲು ಬೆಟ್ಟ ಸಮೀಪವಿದೆ,  ಸೂಕ್ಷ್ಮ ಪರಿಸರ ಪ್ರದೇಶ ಎಂದು ಗುರುತಿಸಲ್ಪಟ್ಟಿದೆ. ಮೀಸಲು ಅರಣ್ಯಕ್ಕೆ ಹೊಂದಿಕೊಂಡ ಜಾಗದಲ್ಲಿ ಕ್ರಷರ್ ನಡೆಸಲಾಗುತ್ತಿದ್ದು, ನಿಯಮಗಳನ್ನು  ಗಾಳಿಗೆ ತೂರಿ ಅನುಮತಿ ನೀಡಲಾಗಿದೆ ಎಂದು ಗ್ರಾಮಸ್ಥರಾದ ಅನಿಲ್, ಸಂಪತ್, ಸಚಿನ್ ತಿಳಿಸಿದ್ದರು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್, ಸೋಮವಾರಪೇಟೆ ಇನ್ಸ್ ಪೆಕ್ಟರ್ ಮುದ್ದು ಮಾದೇವ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರೋಜಾ, ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರಾದ ಕುಮಾರ್. ಆರ್ ಟಿ ಓ ಅಧಿಕಾರಿ. ಸರ್ವೇ ಇಲಾಖೆಯವರು. ಅರಣ್ಯ ಇಲಾಖಾಧಿಕಾರಿಗಳು ಹಾಗೂ ಗ್ರಾಮಸ್ಥರು ಸಭೆಯಲ್ಲಿ  ಇದ್ದರು.

ಸೋಮವಾರಪೇಟೆ ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ತಹಶೀಲ್ದಾರ್ ಕೃಷ್ಣಮೂರ್ತಿ ಮಾತನಾಡಿದರು
ಸೋಮವಾರಪೇಟೆ ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ಗ್ರಾಮಸ್ಥರಿಂದ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು.

‘ನಿಯಮ ಬಾಹಿರ ಇದ್ದರೆ ತಡೆಯಿರಿ’  

ಗ್ರಾಮಸ್ಥರ ಒತ್ತಾಯದ ಮೆರೆಗೆ ಗಾಣಿಗರಿಕೆಯ ಸ್ಥಳ ಅಧಿಕಾರಿಗಳು ಪರಿಶೀಲನೆ ಮಾಡಿದರು. ಬಹುತೇಕ ಗಣಿಗಾರಿಕೆ ನಿಯಮ ಉಲಘನೆ ಮಾಡಿ ನಡೆಯುತ್ತಿದ್ದು   ನಿಯಮ ಬಾಹಿರ ಗಣಿಗಾರಿಕೆಯನ್ನು ತಕ್ಷಣವೇ ನಿಲಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗೆ ತಹಶೀಲ್ದಾರ್ ಕೃಷ್ಣಮೂರ್ತಿ ಆದೇಶಿಸಿದರು.  ಉಳಿದ ಕ್ವಾರಿಗಳಿಗೆ ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೆ ನಡೆಸಿ ಅಲ್ಲಿ ಲೋಪ  ಕಂಡು ಬಂದಲ್ಲಿ ಅವುಗಳನ್ನು ಮುಟ್ಟುಗೊಲು ಹಾಕಲಾಗುವುದು ಎಂದು ಗ್ರಾಮಸ್ಥರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.