ADVERTISEMENT

ವಿರಾಜಪೇಟೆ: ಬಸ್ ತಂಗುದಾಣ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 4:25 IST
Last Updated 9 ಜೂನ್ 2025, 4:25 IST
 ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು.
 ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು.   

ವಿರಾಜಪೇಟೆ: ಪಟ್ಟಣದ ಪಂಜರುಪೇಟೆಯ ನಿಸರ್ಗ ಬಡಾವಣೆ ಬಳಿ ನೂತನವಾಗಿ ನಿರ್ಮಿಸಿದ ಬಸ್ ತಂಗುದಾಣವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಲೋಕಾರ್ಪಣೆಗೊಳಿಸಿದರು.

ಈ ವೇಳೆ ಮಾತನಾಡಿದ ಅವರು ಮಾತನಾಡಿ ಅವರು, ‘ಬಸ್ ತಂಗುದಾಣ ಬೇಕೆಂಬ ಸ್ಥಳಿಯರ ಬೇಡಿಕೆಯಂತೆ ₹ 10.5 ಲಕ್ಷ ಶಾಸಕರ ವಿಶೇಷ ಅನುದಾನದಿಂದ ತಂಗುದಾಣದ ಕಾಮಗಾರಿ ನಡೆಸಲಾಗಿದೆ. ಸಾರ್ವಜನಿಕರು ತಂಗುದಾಣವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.

ನಿಸರ್ಗ ಬಡಾವಣೆಯ ನಿವಾಸಿಗಳು ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಿದರು. ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಮುಖ್ಯಾಧಿಕಾರಿ ಪಿ.ಕೆ.ನಾಚಪ್ಪ, ನಿಸರ್ಗ ಬಡಾವಣೆಯ ನಿವಾಸಿಗಳಾದ ಕಾಣತಂಡ ಜಗದೀಶ್, ಬೀನ ಜಗದೀಶ್, ವಕೀಲ ಡಿ.ಸಿ.ಧ್ರುವಕುಮಾರ್, ಉದ್ಯಮಿ ಮನೋಜ್, ಕಾಳಮಂಡ ಜಗತ್, ಜಿಲ್ಲಾ ಕಾಂಗ್ರೆಸ್ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಧರ್ಮಜ ಉತ್ತಪ್ಪ, ತಾಲ್ಲೂಕು ಅಧ್ಯಕ್ಷ ಜಾನ್ಸನ್, ನಗರ ಸಮಿತಿ ಕಾರ್ಯದರ್ಶಿ ಎಂ.ಎಂ.ಶಶಿಧರನ್, ಪುರಸಭೆ ಸದಸ್ಯರು, ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.

ADVERTISEMENT
ವಿರಾಜಪೇಟೆ ನಿಸರ್ಗ ಬಡಾವಣೆ ಬಳಿ ನಿರ್ಮಿಸಿದ ಬಸ್ ತಂಗುದಾಣವನ್ನು ಶಾಸಕ ಎ.ಎಸ್.ಪೊನ್ನಣ್ಣ ಶನಿವಾರ ಲೋಕಾರ್ಪಣೆಗೊಳಿಸಿದರು.
ವಿರಾಜಪೇಟೆ ನಿಸರ್ಗ ಬಡಾವಣೆ ಬಳಿ ನೂತನವಾಗಿ ನಿರ್ಮಿಸಿದ ಬಸ್ ತಂಗುದಾಣವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರು ಶನಿವಾರ ಲೋಕಾರ್ಪಣೆಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.