ADVERTISEMENT

‘ಮನಸ್ಸಿನಲ್ಲಿ ಉಳಿಯುವ ಕೆಲಸ ಮಾಡಿ’

ಸೋಮವಾರಪೇಟೆ: ಲಯನ್ಸ್ ಪದಾಧಿಕಾರಿಗಳ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 7:40 IST
Last Updated 1 ಆಗಸ್ಟ್ 2024, 7:40 IST
ಸೋಮವಾರಪೇಟೆ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಲಯನ್ಸ್ ಪದಗ್ರಹಣ ಕಾರ್ಯಕ್ರಮವನ್ನು ಸಿ.ಕೆ. ಶಿವಕುಮಾರ್ ಉದ್ಘಾಟಿಸಿದರು
ಸೋಮವಾರಪೇಟೆ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಲಯನ್ಸ್ ಪದಗ್ರಹಣ ಕಾರ್ಯಕ್ರಮವನ್ನು ಸಿ.ಕೆ. ಶಿವಕುಮಾರ್ ಉದ್ಘಾಟಿಸಿದರು   

ಸೋಮವಾರಪೇಟೆ: ನಮ್ಮ ಹಣೆಯಲ್ಲಿ ಜನನ ಮತ್ತು ಮರಣ ಎಂಬ ಎರಡು ಪುಟಗಳು ಮಾತ್ರ ಇದ್ದು, ಮಿಕ್ಕ ಪುಟಗಳನ್ನು ನಾವೇ ಬರೆದುಕೊಳ್ಳಬೇಕಿದೆ ಎಂದು ಬೆಂಗಳೂರು ಯಲಹಂಕ ವಿದ್ಯಾರಣ್ಯಪುರ ಲಯನ್ಸ್ ಕ್ಲಬ್ ಎಂಸಿಸಿ ರಾಜಶೇಖರಯ್ಯ ಅಭಿಪ್ರಾಯಪಟ್ಟರು.

ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ 2024-25 ನೇ ಸಾಲಿನ ಲಯನ್ಸ್ ಕ್ಲಬ್ ಅಧ್ಯಕ್ಷರ ಮತ್ತು ನೂತನ ಕಾರ್ಯಕಾರಿ ಮಂಡಳಿ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು. ನಮ್ಮ ಜೀವನದಲ್ಲಿ ಕೇವಲ ಹುಟ್ಟು ಸಾವು ಮಾತ್ರ ಇರುವುದಿಲ್ಲ. ಅದರ ನಡುವೆ ನಾವು ಜನರ ಮನಸ್ಸಿನಲ್ಲಿ ಉಳಿಯುವಂತಹ ಕೆಲಸಗಳನ್ನು ಮಾಡಬೇಕು. ಪ್ರಪಂಚದಲ್ಲಿ 50 ಸಾವಿರ ಲಯನ್ಸ್ ಸಂಸ್ಥೆಗಳಿದ್ದು, ಕಳೆದ 107 ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವಕಾಶವಂಚಿತರಿಗೆ ಅನೇಕ ಸವಲತ್ತುಗಳನ್ನು ನೀಡುತ್ತಾ ಬರುತ್ತಿದೆ ಎಂದರು.

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಸದಸ್ಯರ ದುಡಿಮೆಯ ಒಂದು ಭಾಗವನ್ನು ಸೇವೆಗೆ ನೀಡುತ್ತಾ ಬರಲಾಗಿದೆ. ನಾವು ಇದ್ದಷ್ಟು ದಿನ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸೇವೆ ಮಾಡಿದಲ್ಲಿ, ನಮ್ಮ ಮುಂದಿನ ಪೀಳಿಗೆ ನಮ್ಮನ್ನು ನೆನೆಯುತ್ತದೆ. ಕೇವಲ ಬದುಕಿಗಾಗಿ ಜೀವನ ನಡೆಸಿದಲ್ಲಿ ಯಾವುದೇ ಪ್ರಯೋಜನ ಇರುವುದಿಲ್ಲ ಎಂದು ಹೇಳಿದರು.

ADVERTISEMENT

ನೂತನ ಸಾಲಿನ ಅಧ್ಯಕ್ಷ ಸಿ.ಕೆ. ಶಿವಕುಮಾರ್, ಕಾರ್ಯದರ್ಶಿ ಪದ್ಮಾಕರ್ ರಾಜೆ ಅರಸ್, ಖಜಾಂಚಿ ಜಗತ್ ಪ್ರಧಾನ್ ಹಾಗೂ ಲಿಯೋ ಕ್ಲಬ್ ಅಧ್ಯಕ್ಷೆ ಪ್ರತೀಕ್ಷ, ಕಾರ್ಯದರ್ಶಿ ಜೀವಿತ ಹಾಗೂ ಖಜಾಂಚಿ ಇಬ್ಬನಿಗೌಡ ಮತ್ತು ತಂಡಕ್ಕೆ ಪ್ರತಿಜ್ಞಾವಿಧಿ ಬೋಧಿಸಿದರು.

ಸಿ.ಕೆ. ಶಿವಕುಮಾರ್ ಮಾತನಾಡಿ, ಒಂದು ವರ್ಷದ ಅವಧಿಯಲ್ಲಿ ಸಮಾಜದಲ್ಲಿನ ಗುರುತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು. ಸಂಸ್ಥೆಯ ಎಲ್ಲ ಸದಸ್ಯರು ಎಲ್ಲ ಕಾರ್ಯ ಚಟುವಟಿಕೆಗಳಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ವೇದಿಕೆಯಲ್ಲಿ ಪ್ರಾಂತೀಯ ಅಧ್ಯಕ್ಷರಾದ ಕನ್ನಿಕಾ ಅಯಪ್ಪ, ವಲಯ ಅಧ್ಯಕ್ಷ ಮಹದೇವಪ್ಪ, ನಿಕಟಪೂರ್ವ ಅಧ್ಯಕ್ಷ ಎ.ಎಸ್. ಮಹೇಶ್, ಖಜಾಂಚಿ ವೀರಪ್ಪ ಇದ್ದರು.

ಸೋಮವಾರಪೇಟೆ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಲಯನ್ಸ್ ಪದಗ್ರಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸಿ.ಕೆ. ಶಿವಕುಮಾರ್ ಅವರಿಗೆ ಯಲಹಂಕ ವಿದ್ಯಾರಣ್ಯಪುರ ಲಯನ್ಸ್ ಕ್ಲಬ್ ಎಂಸಿಸಿ ರಾಜಶೇಖರಯ್ಯ ಅಧಿಕರ ಹಸ್ತಾಂತರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.