ADVERTISEMENT

ಮಡಿಕೇರಿ | ಬಸಪ್ಪ ಶಿಶುವಿಹಾರದಲ್ಲಿ ಸ್ವಾತಂತ್ರ್ಯ ದಿನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 6:13 IST
Last Updated 17 ಆಗಸ್ಟ್ 2024, 6:13 IST
ಮಡಿಕೇರಿಯ ಮಹದೇವಪೇಟೆ ಮಹಿಳಾ ಸಹಕಾರ ಸಂಘ, ಬಸಪ್ಪ ಶಿಶುವಿಹಾರದಲ್ಲಿ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು
ಮಡಿಕೇರಿಯ ಮಹದೇವಪೇಟೆ ಮಹಿಳಾ ಸಹಕಾರ ಸಂಘ, ಬಸಪ್ಪ ಶಿಶುವಿಹಾರದಲ್ಲಿ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು   

ಮಡಿಕೇರಿ: ಇಲ್ಲಿನ ಮಹದೇವಪೇಟೆ ಮಹಿಳಾ ಸಹಕಾರ ಸಂಘ, ಬಸಪ್ಪ ಶಿಶುವಿಹಾರದಲ್ಲಿ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಸಂಘದ ಅಧ್ಯಕ್ಷೆ ಸವಿತಾ ಭಟ್ ಧ್ವಜಾರೋಹಣ ಮಾಡಿದರು. ನಂತರ, ಸಂಭ್ರಮಾಚರಣೆಯ ಕಾರ್ಯಕ್ರಮಗಳು ನಡೆದವು. ಕೆ.ಜಯಲಕ್ಷ್ಮಿ ಮತ್ತು ಎಂ.ಸಿ.ಚೈತ್ರಾ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಧ್ಯಾ ಚಿದ್ವಿಲಾಸ್ ಮತ್ತು ವಂದನಾ ಪೊನ್ನಪ್ಪ ಪ್ರಾರ್ಥನೆ ಮಾಡಿದರು. ಅಧ್ಯಕ್ಷೆ ಸವಿತಾ ಭಟ್ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.

ಸದಸ್ಯೆಯರಿಗಾಗಿ ದೇಶಭಕ್ತಿ ಗೀತೆ ಮತ್ತು ಭಾಷಣ ಸ್ಪರ್ಧೆಗಳೂ ನಡೆದವು. ನಂತರ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಗಳನ್ನು ಪ್ರೇಮಾ ಕೋಟಿ ನಿರೂಪಿಸಿದರೆ, ಸಂಘದ ಉಪಾಧ್ಯಕ್ಷೆ ಶ್ಯಾಮಲಾ ದಿನೇಶ್ ವಂದನಾರ್ಪಣೆ ಮಾಡಿದರು.

ADVERTISEMENT

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ವಸುಂಧರಾ ಪ್ರಸನ್ನ, ಕಮಲಾ ಸುಬ್ಬಯ್ಯ, ಆಯಿಷಾ ಹಮೀದ್, ಉಮಾ ಈಶ್ವರ್, ಶೈಲಾ ಮಂಜುನಾಥ್, ವಸಂತಿ ಪೂಣಚ್ಚ, ಪ್ರೇಮಾ ರಾಘವಯ್ಯ, ಭಾರತಿ ರಮೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.