ನಾಪೋಕ್ಲು: ಇಲ್ಲಿನ ಸಮೀಪದ ಕಕ್ಕುಂದಕಾಡು ಕರಿಚಾಮುಂಡಿ ದೈವಸ್ಥಾನದ ವಾರ್ಷಿಕೋತ್ಸವ ಏಪ್ರಿಲ್ 13 ಮತ್ತು 14ರಂದು ನಡೆಯಲಿದೆ.
13ರಂದು ರಾತ್ರಿ 8.30ಗಂಟೆಗೆ ಭಂಡಾರ ಮನೆಯಿಂದ ಭಂಡಾರ ಹೊರಡುವುದು ನಂತರ ತೋತ, ಚನ್ನಾಲೆ ಮೂರ್ತಿ, ತಮ್ಮಚ್ಚ, ಪೊಟ್ಟುಗುಳಿಗ, ಕೊರತಿ, ಅಂಗಾರೆ ದೈವ ನಡೆದರೆ, 14ರಂದು ಬೆಳಿಗ್ಗೆ 10ಗಂಟೆಗೆ ಗುಳಿಗ ಕೋಲ ನಡೆಯಲಿದೆ.
ಪ್ರಸಾದ ವಿತರಣೆ ನಂತರ ಮಧ್ಯಾಹ್ನ 2ಗಂಟೆಗೆ ಚಾಮುಂಡಿ ದೈವದ ಕೋಲ ಜರುಗಲಿದೆ.
ಭಕ್ತರು, ಸಾರ್ವಜನಿಕರು ದೈವದ ಸಿರಿ ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ದೈವಸ್ಥಾನದ ತಕ್ಕ ಮುಖ್ಯಸ್ಥ ಟಿ.ಕೆ.ಸೂರ್ಯ ಕುಮಾರ್ ವಿನಂತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.