ADVERTISEMENT

ಕೊಡಗು: ‘ಓದುಗನಲ್ಲಿ ಮಾತನಾಡುವ ಕವನ‘

ಮಾಳೇಟಿರ ಸೀತಮ್ಮ ವಿವೇಕ್ ಅವರ ‘ಚೀತೆರ ಕಾಳ ಮುತ್ತ್ ಮಾಲೆ’ ಕವನ ಸಂಕಲನ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 6:08 IST
Last Updated 29 ಜೂನ್ 2025, 6:08 IST
<div class="paragraphs"><p>ಮಡಿಕೇರಿಯಲ್ಲಿ ಶನಿವಾರ ಕೊಡವ ಮಕ್ಕಡ ಕೂಟದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್ ಅವರ ‘ಚೀತೆರ ಕಾಳ ಮುತ್ತ್ ಮಾಲೆ’ ಕವನ ಸಂಕಲನವನ್ನು ಅವರ ತಂದೆ ಕಂಬೀರಂಡ ಕಿಟ್ಟು ಕಾಳಪ್ಪ ಲೋಕಾರ್ಪಣೆಗೊಳಿಸಿ ಪುಸ್ತಕವನ್ನು ಪ್ರಕಾಶಕ ಬೊಳ್ಳಜಿರ ಬಿ.ಅಯ್ಯಪ್ಪ ಅವರಿಗೆ ನೀಡಿದರು.</p></div>

ಮಡಿಕೇರಿಯಲ್ಲಿ ಶನಿವಾರ ಕೊಡವ ಮಕ್ಕಡ ಕೂಟದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್ ಅವರ ‘ಚೀತೆರ ಕಾಳ ಮುತ್ತ್ ಮಾಲೆ’ ಕವನ ಸಂಕಲನವನ್ನು ಅವರ ತಂದೆ ಕಂಬೀರಂಡ ಕಿಟ್ಟು ಕಾಳಪ್ಪ ಲೋಕಾರ್ಪಣೆಗೊಳಿಸಿ ಪುಸ್ತಕವನ್ನು ಪ್ರಕಾಶಕ ಬೊಳ್ಳಜಿರ ಬಿ.ಅಯ್ಯಪ್ಪ ಅವರಿಗೆ ನೀಡಿದರು.

   

ಮಡಿಕೇರಿ: ‘ಚೀತೆರ ಕಾಳ ಮುತ್ತ್ ಮಾಲೆ’ ಕವನ ಸಂಕಲನದಲ್ಲಿರುವ ಕವನಗಳು ಓದುಗರೊಂದಿಗೆ ಮಾತನಾಡುತ್ತವೆ’ ಎಂದು ಲೇಖಕಿ ಹಾಗೂ ಕೊಡವ ಮಕ್ಕಡ ಕೂಟದ ಸಲಹೆಗಾರರಾದ ಐಚಂಡ ರಶ್ಮಿ ಮೇದಪ್ಪ ಹೇಳಿದರು. 

ವೈವಿಧ್ಯಮಯ ವಿಷಯಗಳ ಕೊಡವ ಭಾಷೆಯ 50 ಕವನಗಳ ಸಂಕಲನ ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್ ಅವರ ‘ಚೀತೆರ ಕಾಳ ಮುತ್ತ್ ಮಾಲೆ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು‌. ಭಾಷೆಯ ಬೆಳವಣಿಗೆಯಲ್ಲಿ ಇಂತಹ ಸಾಹಿತ್ಯ ಅಗತ್ಯ ಇದೆ. ಕವನಗಳು ಭಾಷೆಯ ಬಲವನ್ನು ಹೆಚ್ಚಿಸುತ್ತವೆ ಎಂದು ಅಭಿಪ್ರಾಯಪಟ್ಟರು. 

ADVERTISEMENT

ಕೊಡವ ಮಕ್ಕಡ ಕೂಟ  ಹೊರತರುತ್ತಿರುವ 114ನೇ ಪುಸ್ತಕ ಇದಾಗಿದ್ದು, ಮುಖಪುಟದಲ್ಲಿ ಲೇಖಕಿಯ ತಂದೆ, ತಾಯಿ  ಚಿತ್ರವಿದ್ದು, ಅವರ ಹೆಸರಿನಲ್ಲಿಯೇ ಕವನ ಸಂಕಲನ ಇರುವುದು ಪುಸ್ತಕದ ವಿಶೇಷತೆ ಎನಿಸಿದೆ.

 ಮಾಳೇಟಿರ ಸೀತಮ್ಮ ವಿವೇಕ್‌ ಮಾತನಾಡಿದ , ‘ 5 ವರ್ಷಗಳಲ್ಲಿ ಬರೆದ 50 ಕವನಗಳು ಪುಸ್ತಕದಲ್ಲಿವೆ. ಇದರಲ್ಲಿ ಹಲವು ನೀತಿ ಪಾಠಗಳಿದ್ದು, ಕವನಗಳಿಗೆ ಅಂತ್ಯಪ್ರಾಸ ಇದೆ. ಇದನ್ನು ಓದಿ ವಿಮರ್ಶಿಸಬೇಕು’ ಎಂದು ಮನವಿ ಮಾಡಿದರು.

ಪುಸ್ತಕ ಬಿಡುಗಡೆ ಮಾಡಿದ ಲೇಖಕಿಯ ತಂದೆ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕಂಬೀರಂಡ ಕಿಟ್ಟು ಕಾಳಪ್ಪ, ‘ಈ ಪುಸ್ತಕ ಆಪ್ತತೆಯನ್ನು ಮೂಡಿಸುತ್ತದೆ. ಕಾವ್ಯಾಸಕ್ತಿ ಬೆಳೆಸಿಕೊಂಡು ಭಾವನೆಗಳಿಗೆ ಅಕ್ಷರ ರೂಪ ನೀಡಿ ಕವನ ಸಂಕಲನ ಹೊರ ತಂದಿರುವುದು ಹೆಮ್ಮೆ ಎನಿಸಿದೆ. ಕೊಡವ ಮಕ್ಕಡ ಕೂಟ ಹಲವು ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಿದೆ’ ಎಂದು ಶ್ಲಾಘಿಸಿದರು.

ಲೇಖಕಿಯ ತಾಯಿ ಕಂಬೀರಂಡ ಮುತ್ತಮ್ಮ ಹಾಗೂ ಸಮಾಜ ಸೇವಕ ಹಂಚೆಟ್ಟಿರ ಮನು ಮುದ್ದಪ್ಪ ಭಾಗವಹಿಸಿದ್ದರು.

ಹಾಸನದಿಂದ ಹಿರಿಯ ಸಾಹಿತಿ ಚನ್ನೇಗೌಡ, ಎಚ್.ಡಿ.ಕೋಟೆಯಿಂದ ಸಾಹಿತ್ಯಾಭಿಮಾನಿ ಕಾಳ, ಕೊಡವಾಮೆ ಸಂಘಟನೆಯ ಸ್ಥಾಪಕ ಅಧ್ಯಕ್ಷ ಉದಿಯಂಡ ರೋಷನ್ ಸೋಮಣ್ಣ, ಒಂಟಿಯಂಗಡಿಯಿಂದ ಸಾಹಿತ್ಯಾಭಿಮಾನಿ ಮಚ್ಚಾರಂಡ ಸುರೇಶ್ ನಂಜಪ್ಪ ದೂರದ ಊರುಗಳಿಂದ ಈ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದರು.

ಮಡಿಕೇರಿಯಲ್ಲಿ ಶನಿವಾರ ಕೊಡವ ಮಕ್ಕಡ ಕೂಟದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್ ಅವರ ‘ಚೀತೆರ ಕಾಳ ಮುತ್ತ್ ಮಾಲೆ’ ಕವನ ಸಂಕಲನವನ್ನು ಅವರ ತಂದೆ ಕಂಬೀರಂಡ ಕಿಟ್ಟು ಕಾಳಪ್ಪ ಲೋಕಾರ್ಪಣೆಗೊಳಿಸಿದರು.ಲೇಖಕಿ ಐಚಂಡ ರಶ್ಮಿ ಮೇದಪ್ಪ ಕಂಬೀರಂಡ ಮುತ್ತಮ್ಮ ಪ್ರಕಾಶಕ ಬೊಳ್ಳಜಿರ ಬಿ.ಅಯ್ಯಪ್ಪ ಸಮಾಜ ಸೇವಕ ಹಂಚೆಟ್ಟಿರ ಮನು ಮುದ್ದಪ್ಪ ಕವನ ಸಂಕಲನದ ಕರ್ತೃ ಮಾಳೇಟಿರ ಸೀತಮ್ಮ ವಿವೇಕ್ ಭಾಗವಹಿಸಿದ್ದರು

‘ಮಾರಾಟಕ್ಕೆ ಇಲ್ಲ ಉಚಿತ ವಿತರಣೆ’

‘ಕೊಡವ ಮಕ್ಕಡ ಕೂಟವು ಮಾರಾಟ ಮಾಡಿ ಲಾಭ ಗಳಿಸುವುದಕ್ಕೆ ಪುಸ್ತಕವನ್ನು ಹೊರತರುತ್ತಿಲ್ಲ. ಬದಲಿಗೆ ಓದುಗರಿಗೆ ಆಸಕ್ತರಿಗೆ ಉಚಿತವಾಗಿ ನೀಡಲು ಪ್ರಕಟಿಸುತ್ತಿದೆ’ ಎಂದು ಸಂಘಟನೆಯ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ತಿಳಿಸಿದರು. ಸರ್ಕಾರದ ಅನುದಾನವಿಲ್ಲದಿದ್ದರೂ ಸಾಹಿತ್ಯ ಬೆಳವಣಿಗೆಗೆ ಒತ್ತು ನೀಡಲು ದಾನಿಗಳ ನೆರವಿನಿಂದ ಜಿಲ್ಲೆಯ ಹಲವು ಬರಹಗಾರರು ಬರೆದ ಕೊಡವ ಕನ್ನಡ ಇಂಗ್ಲಿಷ್ ಹಿಂದಿ ಸೇರಿದಂತೆ ಹಲವು ಕೃತಿಗಳನ್ನು ಬಿಡುಗಡೆ ಮಾಡಲಾಗಿದೆ.  ಹಲವು ಪುಸ್ತಕಗಳಿಗೆ ಪ್ರಶಸ್ತಿಗಳೂ ಲಭಿಸಿವೆ. ಇನ್ನು ಮುಂದೆಯೂ ಕೂಟ ಬರಹಗಾರರಿಗೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲಿದೆ’ ಎಂದು ಹೇಳಿದರು.

  • ಪುಸ್ತಕದ ಹೆಸರು: ‘ಚೀತೆರ ಕಾಳ ಮುತ್ತ್ ಮಾಲೆ’

  • ಲೇಖಕಿ: ಮಾಳೇಟಿರ ಸೀತಮ್ಮ ವಿವೇಕ್

  • ಪ್ರಕಾಶನ: ಕೊಡವ ಮಕ್ಕಡ ಕೂಟ

  • ಪುಟಗಳ ಸಂಖ್ಯೆ: 88

  • ಕವನಗಳ ಸಂಖ್ಯೆ: 50

  • ಬೆಲೆ: ₹ 99

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.