ADVERTISEMENT

ಕೊಡಗು: ಬಿರುಗಾಳಿಗೆ ಉರುಳಿದ ಮರಗಳು

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 15:37 IST
Last Updated 24 ಜೂನ್ 2025, 15:37 IST
ಕೊಡಗು ಜಿಲ್ಲೆಯ ಸೋಮವಾರಪೇಟೆ– ಕೊಡ್ಲಿಪೇಟೆ ರಸ್ತೆಯಲ್ಲಿ ಮಂಗಳವಾರ ಬಿರುಗಾಳಿಯಿಂದ ಮರ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು
ಕೊಡಗು ಜಿಲ್ಲೆಯ ಸೋಮವಾರಪೇಟೆ– ಕೊಡ್ಲಿಪೇಟೆ ರಸ್ತೆಯಲ್ಲಿ ಮಂಗಳವಾರ ಬಿರುಗಾಳಿಯಿಂದ ಮರ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಬಿರುಸು ತಗ್ಗಿದ್ದರೂ ಗಾಳಿಯ ಅಬ್ಬರ ಕಡಿಮೆಯಾಗಿಲ್ಲ. ಬಿರುಗಾಳಿಗೆ ಹಲವೆಡೆ ಮರಗಳು ಬುಡಮೇಲಾಗಿವೆ.

ಕೊಡ್ಲಿಪೇಟೆ– ಸೋಮವಾರಪೇಟೆ ಮುಖ್ಯರಸ್ತೆಗೆ ಮರ ಉರುಳಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಿರಾಜಪೇಟೆ ಹೋಬಳಿ ಪೊದಕೋಟೆ ಗ್ರಾಮದಲ್ಲಿ ಮನೆ ಕುಸಿದಿದೆ. ಹಾರಂಗಿ ಜಲಾಶಯದ ಹೊರ ಹರಿವನ್ನು 3 ಸಾವಿರ ಕ್ಯುಸೆಕ್‌ನಿಂದ 5 ಸಾವಿರ ಕ್ಯುಸೆಕ್‌ಗೆ ಹೆಚ್ಚಿಸಲಾಗಿದೆ.

ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯಲ್ಲಿ 12 ಸೆಂ.ಮೀ, ಸೋಮವಾರಪೇಟೆ 7, ಭಾಗಮಂಡಲ, ಹುದಿಕೇರಿ 6, ಶನಿವಾರಸಂತೆಯಲ್ಲಿ 5 ಸೆಂ.ಮೀನಷ್ಟು ಮಳೆಯಾಗಿದೆ. ಜೂನ್ 25ರಂದು ಕೊಡಗು ಜಿಲ್ಲೆಗೆ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ನೀಡಿದೆ.

ADVERTISEMENT
ಕೊಡಗು ಜಿಲ್ಲೆಯ ಸೋಮವಾರಪೇಟೆ– ಕೊಡ್ಲಿಪೇಟೆ ರಸ್ತೆಗೆ ಬಿದ್ದ ಮರವನ್ನು ಸಿಬ್ಬಂದಿ ತೆರವುಗೊಳಿಸಿದರು
ನಾಪೋಕ್ಲು ಸಮೀಪದ ಬಾವಲಿ ಗ್ರಾಮದ ಪಾಂಡಂಡ ಕುಟುಂಬಸ್ಥರ ಐನ್ ಮನೆ ಕುಸಿದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.