ADVERTISEMENT

ಆನ್‌ಲೈನ್ ಮೂಲಕ ಕೆಎಂಎ ಸದಸ್ಯತ್ವ; ಸೂಫಿ ಹಾಜಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 13:55 IST
Last Updated 31 ಆಗಸ್ಟ್ 2024, 13:55 IST
ಕೊಡವ ಮುಸ್ಲಿಂ ಅಸೋಸಿಯೇಷನ್ ಸಭೆಯಲ್ಲಿ ಅಧ್ಯಕ್ಷ ಸೂಫಿ ಹಾಜಿ ಮಾತನಾಡಿದರು. ಅಕ್ಕಳತಂಡ ಎಸ್. ಮೊಯ್ದು, ಈತಲತಂಡ ರಫೀಕ್ ತೂಚಮಕೇರಿ, ಹರಿಶ್ಚಂದ್ರ ಪಾಲ್ಗೊಂಡಿದ್ದರು
ಕೊಡವ ಮುಸ್ಲಿಂ ಅಸೋಸಿಯೇಷನ್ ಸಭೆಯಲ್ಲಿ ಅಧ್ಯಕ್ಷ ಸೂಫಿ ಹಾಜಿ ಮಾತನಾಡಿದರು. ಅಕ್ಕಳತಂಡ ಎಸ್. ಮೊಯ್ದು, ಈತಲತಂಡ ರಫೀಕ್ ತೂಚಮಕೇರಿ, ಹರಿಶ್ಚಂದ್ರ ಪಾಲ್ಗೊಂಡಿದ್ದರು   

ಗೋಣಿಕೊಪ್ಪಲು: ‘ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ನ ಸದಸ್ಯತ್ವ ಪಡೆಯುವುದನ್ನು ಸರಳೀಕರಣಗೊಳಿಸುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಆನ್‌ಲೈನ್ ಮೂಲಕ ಸದಸ್ಯತ್ವ ಪಡೆಯಲು ವ್ಯವಸ್ಥೆ ರೂಪಿಸಲಾಗುವುದು’ ಎಂದು ಕೆಎಂಎ ಅಧ್ಯಕ್ಷ ದುದ್ದಿಯಂಡ ಹೆಚ್ ಸೂಫಿ ಹಾಜಿ ಹೇಳಿದರು.

ಸಂಘದ ಸಭೆಯಲ್ಲಿ ಮಾತನಾಡಿದ ಅವರು, ‘ಸಂಸ್ಥೆಯ ಸದಸ್ಯರ ಸಮಗ್ರ ವಿವರಗಳನ್ನು ಡಿಜಿಟಲೀಕರಣ ಗೊಳಿಸಲಾಗುವುದು. ಈ ಕುರಿತ ರೂಪರೇಷೆಗಳು ಅಂತಿಮಗೊಂಡಿದ್ದು ಸಿದ್ಧತೆಗಳು ಆರಂಭಿಸಲಾಗಿದೆ’ ಎಂದು ತಿಳಿಸಿದರು.

‘ಸಂಘವನ್ನು ಬಲಿಷ್ಠಗೊಳಿಸಲು ಸದಸ್ಯತ್ವವನ್ನು ಆನ್‌ಲೈನ್ ಮೂಲಕ ಪಡೆಯುವ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ಸಂಸ್ಥೆಯ ಸದಸ್ಯರ ಸಂಖ್ಯೆ ಹೆಚ್ಚಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು, ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಕೋಶಾಧಿಕಾರಿ ಹರಿಶ್ಚಂದ್ರ ಎ.ಹಂಸ, ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.