ADVERTISEMENT

ಕೊಡಗು ಜಿಲ್ಲೆಯಲ್ಲಿ ಮಳೆ ಬಿರುಸು: ಪಿಯು ಕಾಲೇಜಿಗೆ ರಜೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 3:53 IST
Last Updated 25 ಜೂನ್ 2025, 3:53 IST
<div class="paragraphs"><p>ಕೊಡಗು ಮಳೆ&nbsp;</p></div>

ಕೊಡಗು ಮಳೆ 

   

– ಪ್ರಜಾವಾಣಿ ಸಂಗ್ರಹ ಚಿತ್ರ

ಮಡಿಕೇರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ನಸುಕಿನಿಂದ ಭಾರಿ ಮಳೆಯಾಗುತ್ತಿದ್ದು, ಗಾಳಿಯೂ ತೀವ್ರವಾಗಿ ಬೀಸುತ್ತಿದೆ‌. ಹೀಗಾಗಿ ಮಡಿಕೇರಿ, ಪೊನ್ನಂಪೇಟೆ ತಾಲ್ಲೂಕಿಗೆ ರಜೆ ಘೋಷಿಸಲಾಗಿದೆ. ಸೋಮವಾರಪೇಟೆ ತಾಲ್ಲೂಕಿಗೆ ಮಂಗಳವಾರ ರಾತ್ರಿಯೇ ರಜೆ ಘೋಷಿಸಲಾಗಿತ್ತು.

ADVERTISEMENT

ಇಡೀ ಜಿಲ್ಲೆಯ ಎಲ್ಲ ಪಿಯು ಕಾಲೇಜಿಗೂ ರಜೆ ಘೋಷಿಸಲಾಗಿದೆ ಎಂದು ಡಿಡಿಪಿಯು ಜ್ಯೋತಿ ಪ್ರಜಾವಾಣಿಗೆ ತಿಳಿಸಿದರು.

ಡಿಡಿಪಿಐ ರಂಗಧಾಮಪ್ಪ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸೇರಿದಂತೆ ಉಳಿದೆಲ್ಲ ತಾಲ್ಲೂಕಿನ ಶಾಲೆಗಳಿಗೆ ರಜೆ ‌ನೀಡಲಾಗಿದೆ.

ಕುಶಾಲನಗರದಲ್ಲಿ ಮಳೆ ಬಿರುಸು ಕಡಿಮೆ ಇರುವುದರಿಂದ ಸುಂಟಿಕೊಪ್ಪ ಹೊರತುಪಡಿಸಿ ತಾಲ್ಲೂಕಿನ ಉಳಿದ ಕಡೆ ರಜೆ ನೀಡಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.