ಮಡಿಕೇರಿ: ಯತೀಕ್ ಅಯ್ಯಪ್ಪ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಸಣ್ಣುವಂಡ ತಂಡವು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ‘ಮುದ್ದಂಡ ಕಪ್’ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಮಂಗಳವಾರ ಚೆರುವಾಳಂಡ ವಿರುದ್ಧ 4–1 ಗೋಲುಗಳ ಅಂತರದಿಂದ ಗೆಲುವು ದಾಖಲಿಸಿತು.
ಮತ್ತೊಂದು ಪಂದ್ಯದಲ್ಲಿ ಅಪ್ಪಚ್ಚು ಅವರ 4 ಗೋಲುಗಳ ನೆರವಿನಿಂದ ಸೋಮೆಯಂಡ ತಂಡವು 5-1 ಅಂತರದಿಂದ ಅಲ್ಲಾರಂಡ ವಿರುದ್ಧ ಜಯ ಗಳಿಸಿತು.
ಕಲಿಯಂಡ 5-0 ರಿಂದ ಓಡಿಯಂಡ ವಿರುದ್ಧ, ಕರವಂಡ 2-1ರಿಂದ ಕರಿನೆರವಂಡ ವಿರುದ್ಧ, ಬಯವಂಡ 3-1 ರಿಂದ ಮುಕ್ಕಾಟಿರ (ಹರಿಹರ) ವಿರುದ್ಧ, ಕಾಯಪಂಡ 2-0ರಿಂದ ಮಾಳೇಟಿರ (ಕುಕ್ಲೂರು) ವಿರುದ್ಧ, ಮೇಕೇರಿರ 1-0ಯಿಂದ ಬಲ್ಲಚಂಡ ವಿರುದ್ಧ, ಅಂಜಪರವಂಡ 5-0ಯಿಂದ ಅಯ್ಯನೆರವಂಡ ವಿರುದ್ಧ ಗೆಲುವು ಪಡೆಯಿತು.
ಟೈಬ್ರೇಕರ್ ಹಣಾಹಣಿಯಲ್ಲಿ ನಂಬುಡಮಾಡ 4-3ರಿಂದ ಚೊಟ್ಟೆಯಂಡಮಾಡ ವಿರುದ್ಧ ಗೆಲುವು ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.